ಮನುವಾದದ ವಿಚಾರಧಾರೆ ಮಕ್ಕಳ ತಲೆಗೆ ತುಂಬಲು ಯತ್ನಿಸಿರುವುದರ ವಿರುದ್ಧ ಮೇ 31ರಂದು ಬೃಹತ್ ಪ್ರತಿಭಟನೆ

Prasthutha|

►ಪ್ರಗತಿಪರರ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ

- Advertisement -

ಬೆಂಗಳೂರು: ಮನುಧರ್ಮ ಸ್ಥಾಪಿಸುವ ಉದ್ದೇಶದೊಂದಿಗೆ ಶಾಲಾ ಪಠ್ಯಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದೇ ಉದ್ದೇಶದಿಂದ ಯಾವುದೇ ಅನುಭವ ಇಲ್ಲದ ರೋಹಿತ್ ಚಕ್ರತೀರ್ಥ ಎಂಬಾತನನ್ನು ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿ ಮನುವಾದದ ವಿಚಾರಧಾರೆಯನ್ನು ಮಕ್ಕಳ ತಲೆಗೆ ಒತ್ತಾಯ ಪೂರಕವಾಗಿ ತುಂಬಲು ಹೊರಟಿದ್ದಾರೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ವಿದ್ಯಾರ್ಥಿ ಸಂಘಟನೆಗಳು, ಜನಪರ ಸಂಘಟನೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಎಸ್.ಜಿ.ಸಿದ್ದರಾಮಯ್ಯ ಮಾತು ಮುಂದುವರಿಸಿ, ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನು ಕೈಬಿಡದಿದ್ದರೆ ಮೇ 31ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ವಿವಾದಿತ ವಿಷಯಗಳ ಕುರಿತು ಜಾಗೃತಿಗಾಗಿ 1 ಲಕ್ಷ ಕಿರುಹೊತ್ತಿಗೆ ಹೊರತಂದು ಹಂಚಿಕೆ ಮಾಡಲಾಗುವುದು ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಬಾಬಾ ಸಾಹೇಬ್ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಶಿಕ್ಷಣ, ಹೋರಾಟ ಪಡೆಯಬೇಕೆಂದು ಕರೆ ನೀಡಿದರು. ಆದರೆ, ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಪಡೆದವರೇ ಹೆಚ್ಚಾಗಿ ಮೂಲಭೂತವಾದಿಗಳಾಗಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗ ಅವರಿಗೆ ಬೆಂಬಲ ನೀಡುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ವಿವಾದಿತ ಪಠ್ಯ ಪುಸ್ತಕವೂ ಮಕ್ಕಳ ಕೈಸೇರುವುದನ್ನು ನಾವು ತಡೆಯಬೇಕಾಗಿದೆ. ಈಗಾಗಲೇ ಪೊಲೀಸ್, ನ್ಯಾಯಾಂಗ ಸೇರಿದಂತೆ ಎಲ್ಲೆಡೆ ಅವರ ವಕ್ತಾರರು ಇದ್ದಾರೆ. ಆದರೂ, ನಾವು ಒಗ್ಗೂಡಿ ಇದರ ವಿರುದ್ಧ ಧ್ವನಿಗೂಡಿಸಬೇಕು. ಅದರಲ್ಲೂ ಹೆಚ್ಚಾಗಿ ಸಂಘಟನೆಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ಆರ್ ಎಸ್ ಎಸ್ ನ ಹುನ್ನಾರಗಳನ್ನು ನಾವು ಅರ್ಥ ಮಾಡಿಕೊಂಡು ಅದರ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಶಿಕ್ಷಣ ತಜ್ಞ ಶ್ರೀಪಾದ ಭಟ್ ಮಾತನಾಡಿ, ಇಂತಹ ವಿವಾದಿತ ಪಠ್ಯಗಳನ್ನು ಹೋರಾಟಗಾರರು, ಜನಪ್ರತಿನಿಧಿಗಳು ಮಾತ್ರವಲ್ಲದೆ, ಶಿಕ್ಷಕರು ವಿರೋಧಿಸಬೇಕು. ಅದರ ಜೊತೆಗೆ ವಿದ್ಯಾರ್ಥಿಗಳ ಪೋಷಕರು ಧ್ವನಿಗೂಡಿಸಬೇಕು ಎಂದುಅವರು ಹೇಳಿದರು.
ಹಿರಿಯ ಸಾಹಿತಿ ಕೆ.ಶರೀಫಾ ಮಾತನಾಡಿ, ಈ ಪಠ್ಯದಲ್ಲಿ ಹಲವಾರು ಮಹಿಳಾ ವಿರೋಧಿ ವಿಚಾರಗಳಿವೆ.ಇವು ಮನುವಾದಿ ಚಿಂತನೆಗಳನ್ನು ಪೋಷಿಸುತ್ತವೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನ ವಿರೋಧಿ ಶಿಕ್ಷಣ ನೀತಿಗಳ ವಿರುದ್ಧ ಐಕ್ಯ ಹೋರಾಟ ನಡೆಸಬೇಕಾಗಿದೆ ಎಂದರು.
ಎಸ್ ಎಫ್ ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಮಾತನಾಡಿ, ಇಂತಹ ವಿವಾದಿತ ಸಮಿತಿಯನ್ನುರಾಜ್ಯ ಸರಕಾರ ಈ ಕೂಡಲೇವಿಸರ್ಜನೆ ಮಾಡಬೇಕು. ಅಷ್ಟೇ ಅಲ್ಲದೆ, ಶಿಕ್ಷಣ ಸಚಿವಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕುಎಂದುಒತ್ತಾಯ ಮಾಡಿದರು.
ಸಭೆಯಲ್ಲಿ ಚಿಂತಕ, ಬರಹಗಾರ ಶಿವಸುಂದರ್, ಇತಿಹಾಸತಜ್ಞ ಎನ್.ನರಸಿಂಹಯ್ಯ, ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಕೆವಿಎಸ್ ರಾಜ್ಯ ಸಂಚಾಲಕ ಸರೋವರ ಬೆಂಕಿಕೆರೆ, ದಲಿತ್ ವಿಧ್ಯಾರ್ಥಿ ಪರಿಷತ್ ಶ್ರೀನಾಥ್ ಪೂಜಾರಿ, ನ್ಯಾಯವಾದಿ ಅನಂತ್ ನಾಯ್ಕ್, ಜೆಎಂಎಸ್ ರಾಜ್ಯಾಧ್ಯಕ್ಷೆ ದೇವಿ, ರಾಜ್ಯ ಕಾರ್ಯದರ್ಶಿ ಗೌರಮ್ಮ, ಹೋರಾಟಗಾರ ರಾಜಶೇಖರ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp