ಪೇಶಾವರದ ಶಿಯಾ ಮಸೀದಿಯಲ್ಲಿ ಭಾರೀ ಸ್ಫೋಟ; 30 ಮಂದಿ ಸಾವು, 56 ಮಂದಿಗೆ ಗಾಯ

Prasthutha|

ಇಸ್ಲಾಮಾಬಾದ್‌: ವಾಯವ್ಯ ಪಾಕಿಸ್ತಾನದ ಪೇಶಾವರ ನಗರದ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 30 ಮಂದಿ ಸಾವನ್ನಪ್ಪಿದ್ದು ,56 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಇಸ್ಲಾಮಾಬಾದ್‌ನ ಪಶ್ಚಿಮಕ್ಕೆ ಸುಮಾರು 190 ಕಿಲೋಮೀಟರ್  ದೂರದಲ್ಲಿರುವ ಪೇಶಾವರದ ಕೊಚಾ ರಿಸಾಲ್ದಾರ್ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆಯ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದ್ದು, “ಮಸೀದಿಗೆ  ಪ್ರವೇಶಿಸುವ ಮೊದಲು ವ್ಯಕ್ತಿಯೊಬ್ಬ ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸುವುದನ್ನು ನೋಡಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ಹಾಗೂ  ಆಸ್ಟ್ರೇಲಿಯಾ ತಂಡಗಳ ಮಧ್ಯೆ ರಾವಲ್ಪಿಂಡಿಯಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭದ ದಿನವೇ  ಈ ಘಟನೆ ನಡೆದಿದ್ದು,ಆಸ್ಟ್ರೇಲಿಯ ಕ್ರಿಕೆಟಿಗರು  ಭದ್ರತಾ ಕಳವಳದ ಕಾರಣದಿಂದ ಸುಮಾರು 25 ವರ್ಷಗಳಿಂದ ಪಾಕ್ ಗೆ ಪ್ರವಾಸ ಮಾಡಿರಲಿಲ್ಲ.

Join Whatsapp