ಮಧ್ಯಪ್ರದೇಶ: ಮಹಾಶಿವರಾತ್ರಿ ಪೂಜೆಗೆ ದೇವಸ್ಥಾನ ಪ್ರವೇಶಿಸದಂತೆ ದಲಿತ ಹುಡುಗಿಯನ್ನು ತಡೆದ ಅರ್ಚಕ; ಪ್ರಕರಣ ದಾಖಲು

Prasthutha|

ಭೋಪಾಲ್: ಮಹಾಶಿವರಾತ್ರಿ ಪ್ರಯುಕ್ತ ನಡೆದ ವಿಶೇಷ ಪೂಜೆಗೆ ಆಗಮಿಸಿದ ದಲಿತ ಹುಡುಗಿಯನ್ನು ದೇವಸ್ಥಾನ ಪ್ರವೇಶಿಸದಂತೆ ಪ್ರಧಾನ ಅರ್ಚಕ ತಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾಶಿವರಾತ್ರಿ ಸಂದರ್ಭದಲ್ಲಿ ಮಧ್ಯಪ್ರದೇಶದ ದೇವಸ್ಥಾನವೊಂದರ ಪ್ರಧಾನ ಅರ್ಚಕರೊಬ್ಬರು ದಲಿತ ಬಾಲಕಿಯನ್ನು ಪ್ರವೇಶದ್ವಾರದಲ್ಲೇ ತಡೆದು ನಿಲ್ಲಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅರ್ಚಕನ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಘಟನೆಯ ಕುರಿತು ಖರ್ಗೋನೆ ಪೊಲೀಸರು ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Join Whatsapp