ಸುಳ್ಯದ ಮಸೂದ್ ಹತ್ಯೆ ಪೂರ್ವಯೋಜಿತ, ತಕ್ಷಣ ಕೊಲೆ ಪ್ರಕರಣ ದಾಖಲಿಸಿ: SDPI

Prasthutha|

25 ಲಕ್ಷ ರೂ ಪರಿಹಾರ ಘೋಷಿಸಿ

- Advertisement -

ಮಂಗಳೂರು:  ಬಜರಂಗದಳ ಕಾರ್ಯಕರ್ತರಿಂದ ಕೊಲೆ ಯತ್ನ ನಡೆದು ಹಲ್ಲೆಗೊಳಗಾಗಿ ತೀವ್ರ ನಿಗಾ ಘಟಕದಲ್ಲಿದ್ದ ಸುಳ್ಯ ತಾಲೂಕಿನ ಬೆಳ್ಳಾರೆಯ ಕಳಂಜ ನಿವಾಸಿ ಮುಹಮ್ಮದ್ ಮಸೂದ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಸೂದ್ ನನ್ನು 8 ಮಂದಿ ಸಂಘಪರಿವಾರದ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಸೇರಿ  ಪರಿಚಯದವನೇ ಆಗಿದ್ದ ಮಸೂದ್ ನನ್ನು ಗುಂಪು ಹತ್ಯೆ ನಡೆಸಿದ್ದಾರೆ. ಈ ಕೊಲೆ ನಡೆದ ರೀತಿ ನೋಡಿದರೆ ಇದು ಪೂರ್ವಯೋಜಿತ ಗುಂಪು ಹತ್ಯೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ನಡೆಸುವ ದ್ವೇಷ ಭಾಷಣಗಳು, ಬಿಜೆಪಿ ಶಾಸಕರು, ಸಚಿವರುಗಳ ಹೇಳಿಕೆಗಳು ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಕಾರಣವಾಗುತ್ತಿದೆ. ಇಂತಹ ಗುಂಪು ಹತ್ಯೆ ನಡೆದ ಈ ಸಂದರ್ಭದಲ್ಲಿ ಯಾಕೆ ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಬಾಯಲ್ಲಿ NIA ತನಿಖೆಗೆ ಅದೇಶಿಸಿ ಎಂಬ ಹೇಳಿಕೆಗಳು ಬರುತ್ತಿಲ್ಲ. ಈಗ ಯಾಕೆ ಗುಂಪು ಹಲ್ಲೆ ನಡೆದು ಎರಡು ದಿನ  ಆಗಿಯೂ ಕೂಡ ಕೊಲೆಗಾರರನ್ನು ಪತ್ತೆ ಹಚ್ಚಿ UAPA ದಾಖಲಿಸುವುದಿಲ್ಲ? ಈ ರೀತಿಯ ಗುಂಪು ಹತ್ಯೆ ಕರ್ನಾಟಕದಲ್ಲೂ ನಡೆಯಲು ಆರಂಭಿವಾಗಿದೆ ಎಂದರೆ ಸರಕಾರ ಮತ್ತು ಪೋಲೀಸು ಇಲಾಖೆ ಈ ಹತ್ಯೆಯ ಕುರಿತು ಸೂಕ್ತ ತನಿಖೆಗೆ ಆದೇಶಿಸ ಬೇಕು. ಇದರ ಹಿಂದೆ ಇರುವ ಎಲ್ಲಾ ಕೈಗಳನ್ನು ಕಾನೂನಿನ ಮುಂದೆ ತರಬೇಕು. ರಾಜ್ಯ ಸರಕಾರ ಕೂಡಲೇ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಈ ಗುಂಪು ಹತ್ಯೆ ನಡೆಸಿದ ಬಜರಂಗದಳದ ಗೂಂಡಾಗಳನ್ನು ಬಂಧಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಮತ್ತು ಪರಿಹಾರ ಘೋಷಿಸದೆ ಇದ್ದರೆ SDPI ಶಕ್ತವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಎಚ್ಚರಿಕೆ ನೀಡಿದ್ದಾರೆ.



Join Whatsapp