ಮರ್ಯಮ್ ಅಬ್ದುಲ್ಲಾ ಅಲ್ ಅತ್ತಿಯ ಕತಾರ್ ಮಾನವ ಹಕ್ಕು ಸಮಿತಿ (NHRC) ಅಧ್ಯಕ್ಷೆಯಾಗಿ ಆಯ್ಕೆ

Prasthutha|

ದೋಹ: ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (ಎನ್.ಎಚ್.ಆರ್.ಸಿ) ಅಧ್ಯಕ್ಷೆಯಾಗಿ ಮರ್ಯಮ್ ಬಿಂತ್ ಅಬ್ದುಲ್ಲಾ ಅಲ್ ಅತ್ತಿಯಾ ಬುಧವಾರ ಆಯ್ಕೆಯಾಗಿದ್ದಾರೆ.

- Advertisement -

ಕಳೆದ ವಾರ ನಡೆದ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕಾರ್ಮಿಕ ಸಚಿವರಾಗಿ ಆಯ್ಕೆಯಾದ ಹೆಚ್.ಇ ಡಾ. ಅಲಿ ಬಿನ್ ಸಯೀದ್ ಬಿನ್ ಸ್ಮೈಖ್ ಅಲ್ ಮರ್ರಿ ಅವರಿಂದ ತೆರವಾದ ಸ್ಥಾನಕ್ಕೆ ಮರ್ಯಮ್ ಅವರನ್ನು ಆಯ್ಕೆಗೊಳಿಸಲಾಗಿದೆ.

ಕತಾರ್ ರಾಷ್ಟ್ರದ ಎನ್.ಎಚ್. ಆರ್. ಸಿ ಯ ಶ್ರೇಷ್ಠ ಪರಂಪರೆಯನ್ನು ವಿಶ್ವದಾದ್ಯಂತ ಅಗ್ರ ಸ್ಥಾನದಲ್ಲಿ ಉಳಿಸುವ ಮತ್ತು ಮಾನವ ಹಕ್ಕುಗಳ ಸಾಧನೆಗಳ ವಿಷಯದಲ್ಲಿ ಹೆಚ್ಚಿನ ಶ್ರಮ ವಹಿಸುವುದಾಗಿ ಅತ್ತಿಯಾ ಈ ಸಂದರ್ಭದಲ್ಲಿ ತಿಳಿಸಿದರು.

- Advertisement -

ಮಾತ್ರವಲ್ಲ ಕತಾರ್ ನಲ್ಲಿ ಮಾನವ ಘನತೆಯ ಪ್ರಗತಿಯನ್ನು ಖಚಿತಪಡಿಸಲು ಎಲ್ಲಾ ರಾಷ್ಟ್ರೀಯ ಸಂಸ್ಥೆಗಳ ಸಹಕಾರದ ಹಿನ್ನೆಲೆಯಲ್ಲಿ ಎನ್.ಎಚ್.ಆರ್.ಸಿ ಸಾರಥ್ಯವು ಬೃಹತ್ ಜವಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

Join Whatsapp