ಇಂದಿನಿಂದ ಮಾರುತಿ ಸುಝುಕಿ ಕಂಪೆನಿಯ ಎಲ್ಲಾ ಕಾರುಗಳ ಬೆಲೆ ಏರಿಕೆ!

Prasthutha|

- Advertisement -

ಹೊಸದಿಲ್ಲಿ: ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಮಾರುತಿ ಸುಜುಕಿ ಇಂಡಿಯಾ ಕಂಪೆನಿ, ಇಂದಿನಿಂದ “ವಿವಿಧ ಇನ್ಪುಟ್ ವೆಚ್ಚಗಳಲ್ಲಿನ ಹೆಚ್ಚಳದಿಂದಾಗಿ” “ಎಲ್ಲಾ ಮಾದರಿಗಳ ಕಾರಿನ ಬೆಲೆಗಳಲ್ಲಿ ಹೆಚ್ಚಳವನ್ನು” ಘೋಷಿಸಿದೆ.

ಇನ್‍ಪುಟ್ ಬೆಲೆಗಳು ಅಥವಾ ಕಾರು ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆಯೇರಿಕೆಯನ್ನು ಸರಿದೂಗಿಸಲು ಕಾರುಗಳ ಬೆಲೆಯನ್ನು ಏರಿಸಲಾಗುತ್ತಿದೆ ಎಂದು ಕಂಪೆನಿ ಹೇಳಿದೆ. ಆಲ್ಟೋದಿಂದ ಹಿಡಿದು ಎಸ್-ಕ್ರಾಸ್ ತನಕ ಹಲವು ಕಾರುಗಳನ್ನು ಮಾರಾಟ ಮಾಡುವ ಮಾರುತಿ, ತನ್ನ ವಾಹನಗಳ ಸರಾಸರಿ ಬೆಲೆ ಶೇ 1.3ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

- Advertisement -

ಜನವರಿ 2021ರಿಂದ ಮಾರ್ಚ್ 2022ರ ತನಕ ಕಂಪೆನಿ ಈಗಾಗಲೇ ತನ್ನ ವಾಹನಗಳ ಬೆಲೆಯನ್ನು ಶೇ 8.8ರಷ್ಟು ಏರಿಕೆ ಮಾಡಿದೆ.ಕಳೆದ ಒಂದು ವರ್ಷದಲ್ಲಿ, ವಿವಿಧ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ, ಮೇಲಿನ ಹೆಚ್ಚುವರಿ ವೆಚ್ಚಗಳ ಕೆಲವು ಪರಿಣಾಮಗಳನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಕಂಪನಿಗೆ ಅನಿವಾರ್ಯವಾಗಿದೆ” ಎಂದು ಮಾರುತಿ ಏಪ್ರಿಲ್ 6 ರಂದು ತಿಳಿಸಿತ್ತು

Join Whatsapp