ಪ್ರೀತಿಸಿದ ವೈದ್ಯೆಗೆ ಬೇರೊಬ್ಬನ ಜೊತೆ ವಿವಾಹ| ಯುವಕ ಆತ್ಮಹತ್ಯೆ ಯತ್ನ

Prasthutha|

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಮಾರಸ್ವಾಮಿ ಲೇಔಟ್​ನಲ್ಲಿ ನಡೆದಿದೆ.

- Advertisement -

ಅರುಣ್ (35) ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು,ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ಯಶವಂತಪುರದ ವಸಂತಪುರ ಮೂಲದ ಅರುಣ್​ 8 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದು, ಅಕೆ ಮೈಸೂರಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದರು.

- Advertisement -

ಕಳೆದ 3 ವರ್ಷಗಳ ಹಿಂದೆ ಇಬ್ಬರೂ ಒಪ್ಪಿ ಚಾಮುಂಡಿಬೆಟ್ಟದಲ್ಲಿ ಮದುವೆ ಮಾಡಿಕೊಂಡಿದ್ದರು, ಆದರೆ ಯುವತಿ ನೀಟ್​ ಪರೀಕ್ಷೆಯಿದ್ದು, ಅದನ್ನು ಮುಗಿಸಿ ಪೋಷಕರನ್ನು ಒಪ್ಪಿಸಿ ಬರುವುದಾಗಿ ಯುವತಿ ಬಂದಿದ್ದಳಂತೆ.

ಎರಡು ಮನೆಯವರ ಒಪ್ಪಿಸಿ ಮತ್ತೆ ಮದುವೆಯಾಗುವ ಯೋಜನೆಯಲ್ಲಿದ್ದ ಅರುಣ್​, ಯುವತಿಯನ್ನು ಕಾಯುತ್ತಾ ಕುಳಿತಿದ್ದ. ನಂತರ ತಾನು ಪ್ರೀತಿಸಿದವಳಿಗೆ ಆಕೆಯ ಮನೆಯವರು ಮತ್ತೊಂದು ಮದುವೆ ಮಾಡುತ್ತಿರುವುದು ಗೊತ್ತಾಗಿದೆ.

ಮದುವೆಯ ಲಗ್ನ ಪತ್ರಿಕೆ ನೋಡಿದ ಅರುಣ್​, ಯುವತಿಯನ್ನು ಸಂಪರ್ಕಿಸುವ ಯತ್ನ ಮಾಡಿದ್ದಾನೆ. ಆದರೆ, ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಕೂಡಲೇ ಮನೆಯವರು ಅಸ್ವಸ್ಥನಾಗಿ ಬಿದ್ದಿದ್ದ ಅರುಣ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಮಗೆ ಅನ್ಯಾಯವಾಗಿದ್ದು. ಯುವತಿಯನ್ನು ನಮ್ಮ ಮನೆಗೆ ಕಳಿಸಿಕೊಟ್ಟರೆ ಸಾಕು ಎಂದು ಅರುಣ್​ ತಾಯಿ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp