ಪುದು ಗ್ರಾಮ ಪಂಚಾಯತ್ ಚುನಾವಣೆ| ಒಟ್ಟು 73.7ಶೇ ಮತದಾನ

Prasthutha|

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ಶನಿವಾರ ನಡೆಯಿತು.
10 ವಾರ್ಡ್ ಗಳಲ್ಲಿ ಒಟ್ಟು 11164 ಮತದಾರರಿದ್ದು, 4060 ಪುರುಷರು, 4168 ಮಹಿಳೆಯರು ಸೇರಿದಂತೆ ಒಟ್ಟು 8228 ಮತದಾರರು ಮತದಾನದಲ್ಲಿ ಪಾಲ್ಗೊಂಡರು.

- Advertisement -

10 ವಾರ್ಡ್ ಗಳ 34 ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ ಸುಮಾರು 99 ಮಂದಿ ಸ್ಪರ್ಧೆಯಲ್ಲಿದ್ದರು. ಫೆ.28 ಕ್ಕೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದ್ದು, 99 ಮಂದಿಯ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಶನಿವಾರ ವಾರದ ಕೊನೆಯ ದಿನವಾದರೂ ಪುರುಷರು ಮತ್ತು ಮಹಿಳೆಯರು ಎಂದಿನಂತೆ ಉತ್ಸಾಹದಲ್ಲಿ ಮತದಾನದಲ್ಲಿ ಪಾಲ್ಗೊಂಡರು.

- Advertisement -

“ಜನರ ಸಹಕಾರ ಮತ್ತು ಹೊಂದಾಣಿಕೆಯಿಂದ ಪುದು ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ನಡೆದಿದೆ ಮುಂದಿನ ದಿನಗಳಲ್ಲಿ ಇದೇ ರೀತಿ ಜನರ ಸಹಕಾರದ ನಿರೀಕ್ಷೆಯಲ್ಲಿ ಪೋಲಿಸ್ ಇಲಾಖೆ ಕೂಡ ಸಹಕರಿಸಲಿದೆ”

  • ಸಂತೋಷ್ ಶೆಟ್ಟಿ ಸರ್ಕಲ್ ಇನ್ಸ್ ಪೆಕ್ಟರ್
    ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆ

“ಪುದು ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಬಂಟ್ವಾಳ ತಾಲೂಕು ಆಡಳಿತ, ಮತ್ತು ಮತದಾರರಿಗೆ ಹಾಗೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ ಪೋಲಿಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ”

ಮೋಹನ್ ಎನ್. ಚುನಾವಣಾಧಿಕಾರಿ ಪುದು

Join Whatsapp