ಹೆಚ್ಚುತ್ತಿರುವ ರಕ್ತಸಂಬಂಧಿಗಳ ನಡುವಿನ ವಿವಾಹ; ಕರ್ನಾಟಕಕ್ಕೆ ಎರಡನೇ ಸ್ಥಾನ

Prasthutha|

ಬೆಂಗಳೂರು: ರಕ್ತಸಂಬಂಧಿಗಳ ನಡುವೆ ವಿವಾಹದ ವಿಷಯದಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, 15-49 ವಯೋಮಿತಿಯ  ಮಹಿಳೆಯರು ರಕ್ತಸಂಬಂಧಿಗಳ ಜತೆಗೇ ವೈವಾಹಿಕ ಬಂಧನಕ್ಕೆ ಒಳಗಾಗುತ್ತಿರುವ ಶೇಕಡಾವಾರು ಪ್ರಮಾಣ ರಾಜ್ಯದಲ್ಲಿ ಅಧಿಕ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ವರದಿ ಹೇಳಿದೆ.

- Advertisement -

ರಾಜ್ಯದಲ್ಲಿ ಶೇಕಡಾ 27ರಷ್ಟು ಮಹಿಳೆಯರು ತಮ್ಮ ನಿಕಟ ಸಂಬಂಧಿಗಳು ಅಂದರೆ ಸೋದರ ಸಂಬಂಧಿ, ಮಾವ ಮತ್ತು ಬಾವಂದಿರ ಜತೆ ವಿವಾಹವಾಗುತ್ತಿದ್ದಾರೆ. ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ತಮಿಳುನಾಡಿನಲ್ಲಿ (ಶೇಕಡಾ 28ರಷ್ಟು)  ಇಂತಹ ವಿವಾಹಗಳು ನಡೆಯುತ್ತವೆ.

ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಜನಿಸುವ ಮಕ್ಕಳಲ್ಲಿ ವಂಶವಾಹಿ ವ್ಯತ್ಯಯ ಅಥವಾ ಅಪಸರಣ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯ ಹೆಚ್ಚು ಎಂದು ವೈದ್ಯಕೀಯ ಅಧ್ಯಯನಗಳು ತಿಳಿಸಿವೆ.

- Advertisement -

“ನಮ್ಮ ಬಳಿಗೆ ಬರುವ ರೋಗಿಗಳ ಬಹುತೇಕ ಪೋಷಕರು ರಕ್ತಸಂಬಂಧಿಕರನ್ನು ವಿವಾಹವಾಗಿರುವುದು ಕಂಡುಬರುತ್ತದೆ. ಇದು ನಿಶ್ಚಿತವಾಗಿಯೂ ಮಕ್ಕಳಲ್ಲಿ ಹಲವು ಜನ್ಮಜಾತ ಸಮಸ್ಯೆಗಳು ಮತ್ತು ವಂಶವಾಹಿ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಬೆಂಗಳೂರಿನ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ನ ಸಲಹಾ ವೈದ್ಯೆ ಡಾ.ಕೃತಿ ವೃಷ್ಣಿ  ತಿಳಿಸಿದ್ದಾರೆ.

Join Whatsapp