ಮರ್ಹೂಂ ಫಾಝಿಲ್ ಮಂಗಳಪೇಟೆ ಸ್ಮರಣಾರ್ಥ ದ.ಕ.ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಯಶಸ್ವೀ ರಕ್ತದಾನ ಶಿಬಿರ

Prasthutha|

ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ 6 ನೇ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಸದಸ್ಯರಾದ ಫಾಝಿಲ್ ಮಂಗಳಪೇಟೆ ಸ್ಮರಣಾರ್ಥ  ಭಾನುವಾರ ದ.ಕ. ಜಿಲ್ಲೆಯ ನಾಲ್ಕು ನಗರಗಳಲ್ಲಿ  ಏಕ ಕಾಲಕ್ಕೆ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಬ್ಲಡ್ ಡೊನೇಷನ್ ಫಿಯೆಸ್ಟಾವು  542 ಯುನಿಟ್ ರಕ್ತ ಸಂಗ್ರಹದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದೆ.

- Advertisement -

1.ಪುತ್ತೂರು : ಬಿಗ್ ಮೂವರ್ಸ್ ಗೋಳಿಕಟ್ಟೆ ಹಾಗೂ ಸಿಟಿ ಬ್ರದರ್ಸ್ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ರಕ್ತನಿಧಿಯ ಸಹಯೋಗದೊಂದಿಗೆ ಪುತ್ತೂರಿನ ಲಯನ್ಸ್ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 101  ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಗಳಾದರು.

2.ಉಳ್ಳಾಲ : B ಬಾಯ್ಸ್ ಅಳೇಕಲ,ಉಳ್ಳಾಲ ಹಾಗೂ ಮೆಹಫಿಲ್ ಗೈಸ್ ಅಳೇಕಲ, ಉಳ್ಳಾಲ ಜಂಟಿ ಆಶ್ರಯದಲ್ಲಿ ಆಶಾ ಜ್ಯೋತಿ ರಕ್ತಕೇಂದ್ರ ಶಿವಮೊಗ್ಗ ರಕ್ತನಿಧಿಯ ಸಹಯೋಗದೊಂದಿಗೆ ಉಳ್ಳಾಲದ ಅಳೇಕಲದಲ್ಲಿರುವ ಮದನಿ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 202 ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಗಳಾದರು.

- Advertisement -

3. : G.C.C ಹೆಲ್ಪ್ ಲೈನ್ ಟ್ರಸ್ಟ್ (ರಿ.) ಅಮ್ಮುಂಜೆ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ರಕ್ತನಿಧಿಯ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಬೀರಂದಡಿಯ ಮುನವ್ವರುಲ್ ಇಸ್ಲಾಂ ಮದರಸದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 133 ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಗಳಾದರು.

4.ಉಳಾಯಿಬೆಟ್ಟು,ಮಂಗಳೂರು : UBT ಹೆಲ್ಪ್ ಗೈಸ್(ರಿ),SKSSF ಉಳಾಯಿಬೆಟ್ಟು,SSF ಉಳಾಯಿಬೆಟ್ಟು,PFI ಉಳಾಯಿಬೆಟ್ಟು,E2 ಗೈಸ್ (ರಿ),SMA (ರಿ),D2M ಉಳಾಯಿಬೆಟ್ಟು,ಪ್ಲೇ ಬಾಯ್ಸ್ ,ಚಾರ್ ಮಿನಾರ್ ಹಾಗೂ ಜಾನ್ ಗೈಸ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ, ಮಂಗಳೂರು ರಕ್ತನಿಧಿಯ ಸಹಯೋಗದೊಂದಿಗೆ ಉಳಾಯಿಬೆಟ್ಟುವಿನ ಅಲ್ ಮದೀನ ಮಸೀದಿ ಹತ್ತಿರವಿರುವ ಜಿ.ಎಂ.ಕೆ ಕಟ್ಟಡದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 106 ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಗಳಾದರು.

ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ ನಡೆದ ಈ ಬೃಹತ್ ಸಾರ್ವಜನಿಕ ರಕ್ತದಾನ ಅಭಿಯಾನದಲ್ಲಿ ರಕ್ತದಾನ ಮಾಡಿದ ಮತ್ತು ಸಹಕರಿಸಿದ ಎಲ್ಲರಿಗೂ ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

2016 ಆಗಸ್ಟ್ 08 ಕ್ಕೆ ಸ್ಥಾಪನೆಗೊಂಡ ಸಂಸ್ಥೆಯು ಕರ್ನಾಟಕ ಸರಕಾರದಿಂದ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿದ್ದು, ಈ ವರೆಗೆ 212 ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 28 ಆಸ್ಪತ್ರೆಯ ರಕ್ತನಿಧಿಗಳ ಸಹಯೋಗದೊಂದಿಗೆ 207 ರಕ್ತದಾನ ಶಿಬಿರಗಳನ್ನು ಆಯೋಜಿಸಿ ಆ ಮೂಲಕ 12154 ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದು ಹಾಗೂ ತುರ್ತು ಸಂದರ್ಭಗಳಲ್ಲಿ ನೇರವಾಗಿ ರಕ್ತನಿಧಿಗಳಿಗೆ 2383 ರಕ್ತದಾನಿಗಳನ್ನು ಪೂರೈಸುವ ಮೂಲಕ ಒಟ್ಟು 14537 ಯೂನಿಟ್ ರಕ್ತವನ್ನು ರಕ್ತನಿಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.ಒಂದೇ ತಿಂಗಳಿನಲ್ಲಿ ಗರಿಷ್ಠ 24 ರಕ್ತದಾನ ಶಿಬಿರಗಳನ್ನು ಹಾಗೂ ಒಂದೇ ದಿನದಲ್ಲಿ ಗರಿಷ್ಠ 21 ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಕೀರ್ತಿಯನ್ನು ಕೂಡಾ ತನ್ನದಾಗಿಸಿ ಕೊಂಡಿದೆ. ದಿನನಿತ್ಯ ಸರಾಸರಿ 20 ರಿಂದ 30 ಯೂನಿಟ್ ರಕ್ತವನ್ನು ರೋಗಿಗಳಿಗೆ ಪೂರೈಸುತ್ತಿದೆ.ಅಲ್ಲದೇ ಪ್ರತಿನಿತ್ಯ ಆವಶ್ಯವಿರುವ ತಾಜಾ ರಕ್ತಗಳ ತುರ್ತು ಮನವಿಯನ್ನು ಕೂಡಾ ಸ್ವೀಕರಿಸಿ ದಾನಿಗಳನ್ನು ಹುಡುಕಿ ಅಗತ್ಯವಿರುವ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಪೂರೈಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.

COVID – 19 ತುರ್ತು ಸಮಯದಲ್ಲಿ 672 ರಕ್ತದಾನಿಗಳನ್ನು ನೇರವಾಗಿ ರಕ್ತನಿಧಿಗಳಿಗೆ ಪೂರೈಸಿ ಕೊರೋನಾ ಭೀತಿಯ ನಡುವೆಯೂ ತುರ್ತು ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ರಕ್ತದಾನಿಗಳನ್ನು ಪೂರೈಕೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ.

Join Whatsapp