ನಮ್ಮ ನೀತಿಗಳನ್ನು ಸರಿಪಡಿಸದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು: ಮನೋಜ್ ಝಾ

Prasthutha|

ಹೈದರಾಬಾದ್, ಜುಲೈ 30: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರದ ವೈಫಲ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ರಾಜ್ಯಸಭಾ ಸದಸ್ಯ ಪ್ರೊ.ಮನೋಜ್ ಝಾ, ನಾವು ನಮ್ಮ ನೀತಿಗಳನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲು ಎಂದು ಎಚ್ಚರಿಸಿದ್ದಾರೆ.

- Advertisement -

ಭಾವನಾತ್ಮಕ ಭಾಷಣಗಳಿಗೆ ಹೆಸರುವಾಸಿಯಾದ ರಾಜ್ಯಸಭಾ ಸದಸ್ಯ ಪ್ರೊ.ಮನೋಜ್ ಝಾ, ರಾಜ್ಯಸಭೆಯ ಅಧಿವೇಶನದಲ್ಲಿ ಮತ್ತೊಮ್ಮೆ ಗದ್ಗರಿತವಾಗಿ ಮಾತನಾಡಿದ್ದಾರೆ.

ಇಂದು ನಾನು ರಾಜಕೀಯ ಪಕ್ಷವೊಂದರ ಸದಸ್ಯನಾಗಿ ಮಾತನಾಡುತ್ತಿಲ್ಲ. ಸಾಂಕ್ರಾಮಿಕ ರೋಗದಿಂದ ಆತ್ಮೀಯರನ್ನು ಮತ್ತು ತಮ್ಮವರನ್ನು ಕಳೆದುಕೊಂಡವರ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಈ ಹಿಂದೆ ಪ್ರಾಣ ಕಳೆದುಕೊಂಡ ಎಲ್ಲರಲ್ಲಿಯೂ ಕ್ಷಮೆಯಾಚಿಸಲು ಬಯಸುತ್ತೇನೆಂದು ಅವರು ತಿಳಿಸಿದ್ದಾರೆ.

- Advertisement -

ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲವಾದ್ದರಿಂದ ದೇಶದಲ್ಲಿ ಕೊರೋನಾ ಸಾವುಗಳಿಗೆ ಸಂಬಂಧಿಸಿದಂತೆ ನಾನು ಆರು ಲೇಖನಗಳನ್ನು ಬರೆದಿದ್ದೇನೆ. ಅದನ್ನು ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಕೂಡ ಮೆಚ್ಚಿದ್ದಾರೆ. ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ತನ್ನ ಅಧಿವೇಶನದಲ್ಲಿ 50ಕ್ಕೂ ಅಧಿಕ ಮಂದಿ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು ಎಂದು ಕೊರೋನ ಸಾವಿನ ಸಂಖ್ಯೆಯನ್ನು ಉಲ್ಲೇಖಿಸಿ ಝಾ ಮಾತನಾಡಿದ್ದಾರೆ.

ಗಂಗಾನದಿಯಲ್ಲಿ ತೇಲಿ ಬರುತ್ತಿದ್ದ ಶವಗಳಲ್ಲಿ ನಾವು ಕ್ಷಮೆಯಾಚಿಸಬೇಕಾಗಿದೆ. ಸಂಸದರಾಗಿರುವುದರಿಂದ ನಾವು ಅವರಿಗೆ ನೆರವಾಗಬಹುದೆಂದು ಭಾವಿಸಿ ಜನರು ಅವರ ಸಂಬಂಧಿಕರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ನಮಗೆ ಕರೆ ಮಾಡುತ್ತಿದ್ದರು. ಆದರೆ ಅವರ ಬೇಡಿಕೆಗಳನ್ನು ಪೂರೈಸಲು ನಮಗೆ ಸಾಧ್ಯವಾಗಿಲ್ಲವೆಂದು ಜಾಹ್ ವಿಷಾದಿಸಿದರು.

ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಪ್ರತಿಯೊಬ್ಬರ ಬಗ್ಗೆ ಮಾತನಾಡುತ್ತಾ 1947 ನಂತರ ಇದು ನಮ್ಮ ಸಾಮೂಹಿಕ ವೈಫಲ್ಯಕ್ಕೆ ಜೀವಂತ ಉದಾಹರಣೆಯೆಂದು ಜಾಹ್ ಬಣ್ಣಿಸಿದ್ದಾರೆ.

ಕೊರೋನಾ ಎರಡನೇ ಅಲೆಯಿಂದ ದೇಶದ ಒಂದುವರೆ ತಿಂಗಳು ಸಂಕಷ್ಟದಲ್ಲಿ ದಿನಗಳನ್ನು ಕಳೆದಿದೆ. ಕೊರೋನಾವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸರ್ಕಾರ ಮತ್ತು ಈ ದೇಶದ ವ್ಯವಸ್ಥೆ ವೈಫಲ್ಯವಾಗಿದೆ ಎಂದು ಜಾಹ್ ತಿಳಿಸಿದ್ದಾರೆ. ಗಂಗಾದಲ್ಲಿ ತೇಲುತ್ತಿರುವ ಮೃತ ದೇಹಗಳ ಬಗ್ಗೆ ಮಾತನಾಡುತ್ತಾ, “ನಮಗೆ ಜೀವನದಲ್ಲಿ ಮತ್ತು ಸಾವಿನಲ್ಲಿ ಹೆಚ್ಚಿನ ಘನತೆ ಬೇಕು” ಎಂದು ಹೇಳಿದರು. “ನಾವು ನಮ್ಮ ನೀತಿಗಳನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ” ಎಂದು ಪ್ರೊ. ಜಾಹ್ ಭಾವನಾತ್ಮಕವಾಗಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.



Join Whatsapp