‘ಮನ್ ಕಿ ಬಾತ್’ ಗೆ 10 ಲಕ್ಷಕ್ಕೂ ಮಿಕ್ಕ ಡಿಸ್ ಲೈಕ್ಸ್: ಮುಜುಗರ ತಪ್ಪಿಸಲು ಡಿಸ್ ಲೈಕ್ಸ್ ಡಿಲೀಟ್ ಮಾಡಿದ ಬಿಜೆಪಿ

Prasthutha|

ನವದೆಹಲಿ: ಬಿಜೆಪಿಯ ಯೂಟ್ಯೂಬ್ ಚಾನೆಲ್ ನಲ್ಲಿ ಆಗಸ್ಟ್ 30 ರಂದು ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿಯ ‘ಮನ್ ಕಿ ಬಾತ್’ ಎಂಬ ಮಾಸಿಕ ರೇಡಿಯೋ ಭಾಷಣಕ್ಕೆ ವೀಕ್ಷಕರಿಂದ ಅತ್ಯಂತ ತೀಕ್ಷ್ಣವಾದ ಪ್ರತಿಕ್ರಿಯೆ ದೊರಕಿದ್ದು, ಕೇಸರಿ ಪಾಳಯ ಮುಜುಗರಕ್ಕೀಡಾಗಿದೆ.

- Advertisement -

ಮನ್ ಕಿ ಬಾತ್ ಪ್ರಸಾರವಾಗಿ ಸುಮಾರು 24 ಗಂಟೆಗಳ ಒಳಗಾಗಿ ಸರಿಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮವನ್ನು ಡಿಸ್ ಲೈಕ್ ಮಾಡಿದ್ದು, ಇದು ಪಕ್ಷದ ಯೂಟ್ಯೂಬ್ ಚಾನೆಲ್ ನಲ್ಲಿ ಅತ್ಯಂತ ಇಷ್ಟವಾಗದ ವೀಡಿಯೊಗಳಲ್ಲಿ ಒಂದು ಎಂದು ಹೆಸರಿಸಲ್ಪಟ್ಟಿದೆ.

‘ಮನ್ ಕಿ ಬಾತ್’ ವೀಡಿಯೊವನ್ನು ಬರೀ 14 ಸಾವಿರ ಜನ ಮಾತ್ರ ಲೈಕ್ ಮಾಡಿದ್ದು, ಗುರುವಾರ ತಲುಪೋದರ ಒಳಗೆ ಡಿಸ್ ಲೈಕ್ ಗಳು ಒಂದು ಮಿಲಿಯನ್ ಗಿಂತಲೂ ಹೆಚ್ಚಾಗಿದೆ. ಇದು ಬಿಜೆಪಿಗೆ ದೊಡ್ಡ ಮುಜುಗರವಾಗಿದೆ.

- Advertisement -

ಚಾನೆಲ್ 3.5 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಆದರೆ ಬಿಜೆಪಿ ಚಾನೆಲ್ ನಲ್ಲಿ ಈ ವೀಡಿಯೊವನ್ನು ಸುಮಾರು 46.6 ಲಕ್ಷ ವೀಕ್ಷಕರು ವೀಕ್ಷಿಸಿದ್ದಾರೆ.

ಡಿಸ್ ಲೈಕ್ಸ್ ಗಳು ಅಧಿಕವಾಗುತ್ತಿದ್ದಂತೆ ಮುಜುಗರ ತಪ್ಪಿಸಲು ಅದನ್ನು ಚಾನೆಲ್ ಅಧಿಕೃತರು ಡಿಲೀಟ್ ಮಾಡಿದ್ದಾರೆ .ಈ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿ ನಿಜವಾದ ಪ್ರತಿಕ್ರಿಯೆಗೆ ಹೆದರುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಯೂಟೂಬ್ ಈಗ ಮೋದಿ ಪರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

Join Whatsapp