ಬಲವಂತದ ಜನಸಂಖ್ಯಾ ನಿಯಂತ್ರಣ ಅಪಾಯಕಾರಿ: ಕೇಂದ್ರ ಸಚಿವ ಎಸ್ ಜೈಶಂಕರ್

Prasthutha|

ಗಾಂಧಿನಗರ: ಬಲವಂತದ ಜನಸಂಖ್ಯಾ ನಿಯಂತ್ರಣವು ತುಂಬಾ ಅಪಾಯಕಾರಿ ಪರಿಣಾಮಗಳನ್ನು ಬೀರಬಹುದು, ಇದು ಲಿಂಗ ಅಸಮತೋಲನವನ್ನು ಉಂಟುಮಾಡಬಹುದು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

- Advertisement -

“The India Way: Strategies for an Uncertain World” ಎಂಬ ತನ್ನ ಪುಸ್ತಕದ ಗುಜರಾತಿ ಅವತರಣಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಣ, ಸಾಮಾಜಿಕ ಅರಿವು ಮತ್ತು ದೇಶದ ಸಮೃದ್ಧಿಯಿಂದಾಗಿ ಭಾರತದ ಜನಸಂಖ್ಯೆಯು ಕ್ಷೀಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಪ್ರತಿಯೊಬ್ಬರ ನಡುವಿನ ಕುಟುಂಬದ ಗಾತ್ರ ಚಿಕ್ಕದಾಗುತ್ತಿದೆ. ಭಾರತದ ಜನಸಂಖ್ಯೆಯ ಬೆಳವಣಿಗೆ ದರ ಕೂಡಾ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟರು.

Join Whatsapp