ಮಣಿಪುರ: ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಇಂಟರ್ ನೆಟ್ ನಿಷೇಧ ತೆರವು

Prasthutha|

ಇಂಫಾಲ: ಹಿಂಸಾಚಾರದಿಂದ ನಲುಗುತ್ತಿರುವ ಮಣಿಪುರದ ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಇಂಟರ್ ನೆಟ್ ನಿಷೇಧವನ್ನು ಸರ್ಕಾರವು ತೆರವುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

- Advertisement -


ಪ್ರಯೋಗಾರ್ಥವಾಗಿ ನಾಗಾ ಬಹುಸಂಖ್ಯಾತ ಉಖ್ರುಲ್, ಸೇನಾಪತಿ, ಚಂಧೇಲ್ ಮತ್ತು ತಮೆಂಗ್ಲೊಂಗ್ ಜಿಲ್ಲಾ ಕೇಂದ್ರಗಳಲ್ಲಿ ಇಂಟರ್ ನೆಟ್ ನಿಷೇಧ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಯೋಗಾರ್ಥವಾಗಿ ಮೊಬೈಲ್ ಟವರ್ ಕಾರ್ಯಗತಗೊಳಿಸುವಂತೆ ಮಣಿಪುರದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.



Join Whatsapp