ಮಯನ್ಮಾರ್ ನಿರಾಶ್ರಿತರಿಗೆ ಆಹಾರ ಮತ್ತು ವಸತಿ ನಿರ್ಬಂಧ ಹೇರಿದ ಮಣಿಪುರ ಸರ್ಕಾರ

Prasthutha|

ಮಯನ್ಮಾರ್ ನಿರಾಶ್ರಿತರಿಗೆ ಸ್ಥಳೀಯರು ಮತ್ತು ಸ್ಥಳೀಯ ಸರಕಾರಗಳು ಆಹಾರ ಅಥವಾ ಆಶ್ರಯ ನೀಡುವುದನ್ನು ಮಣಿಪುರ ಸರ್ಕಾರ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಮಾನವೀಯ ಪರಿಗಣನೆಗೆ ಅರ್ಹರು ಮತ್ತು ಗಂಭೀರವಾದ ಗಾಯಗಳಾದವರಿಗೆ ಚಿಕಿತ್ಸೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -

ಮಯನ್ಮಾರ್‌ನಲ್ಲಿ ಸೈನ್ಯವು ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರವನ್ನು ಮುಂದುವರಿಸುತ್ತಿರುವುದರಿಂದ ಹೆಚ್ಚಿನ ನಿರಾಶ್ರಿತರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಆಶ್ರಯ ಕೇಳಿ ಬರುವವರನ್ನು ಹಿಂದೆ ಕಳುಹಿಸಬೇಕೆಂದು ಮಣಿಪುರ ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ಶುಕ್ರವಾರ ಯಾಂಗೊನ್‌ನಲ್ಲಿ ಸೈನಿಕರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 90 ಜನರನ್ನು ಗುಂಡಿಕ್ಕಿ ಕೊಂದಿದ್ದರು. ಮಣಿಪುರ ಸರ್ಕಾರ ಹೊರಡಿಸಿದ ಆದೇಶದಲ್ಲಿ ನಿರಾಶ್ರಿತರಿಗೆ ಆಶ್ರಯ ಮತ್ತು ಆಹಾರ ಒದಗಿಸಲು ಯಾವುದೇ ಶಿಬಿರಗಳನ್ನು ಸ್ಥಾಪಿಸಬಾರದು ಎಂದು ನಿರ್ದೇಶಿಸಿದೆ.

- Advertisement -

ಬೈರನ್ ಸಿಂಗ್ ಸರ್ಕಾರದ ಈ ಕ್ರಮವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದು ಅಮಾನವೀಯ ಮತ್ತು ದೇಶದ ದೀರ್ಘ ಕಾಲದ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂಬ ಟೀಕೆ ಕೇಳಿ ಬರುತ್ತಿದೆ.



Join Whatsapp