ಕಾರು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿದ ಮಣಿಕಂಠ ರಾಠೋಡ

Prasthutha|

►ಬಿಜೆಪಿ ಮುಖಂಡನ ಮುಖವಾಡ ಕಳಚಿದ ಪೊಲೀಸರು

- Advertisement -

ಕಲಬುರಗಿ: ಕಾರು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮುಖವಾಡವನ್ನು ಶಹಬಾದ್ ಪೊಲೀಸರು ಕಳಚಿದ್ದಾರೆ. ನಡೆದ ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿರೋದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಮಾಲಗತ್ತಿ ಸಮೀಪ ರಾಷ್ಟ್ರೀಯ ಹೆದ್ದಾರಿ-150 ರ ಬದಿಯಲ್ಲಿ ಇರುವ ತಮ್ಮ ಫಾರ್ಮ್ ಹೌಸ್ನಿಂದ ಕಲಬುರಗಿಗೆ ತೆರಳುತ್ತಿದ್ದೆ. ಶಂಕರವಾಡಿ ಕ್ರಾಸ್ ಹತ್ತಿರ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿ ಓಡಿ ಹೋಗಿದ್ದರು ಎಂದು ಆರೋಪಿಸಿ ಮಣಿಕಂಠ ರಾಠೋಡ ಅವರು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 19ರಂದು ದೂರು ದಾಖಲಿಸಿದ್ದ. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಅಪಘಾತವನ್ನು ಹಲ್ಲೆಯಾಗಿ ಬಿಂಬಿಸಿದ್ದು ಗೊತ್ತಾಗಿದೆ.

- Advertisement -

ಶಹಾಬಾದ್ ತಾಲ್ಲೂಕಿನ ಶಂಕರವಾಡಿ ಕ್ರಾಸ್ ಬಳಿ ಹಲ್ಲೆ ಆಗಿದ್ದಾಗಿ ಮುಖಂಡ ಮಣಿಕಂಠ ರಾಠೋಡ ದೂರು ನೀಡಿದ್ದರು. ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯತ್ನ ಅಲ್ಲ, ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿರುವುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಸಲು ತಿಳಿಸಿದರು.



Join Whatsapp