ಜನವಿರೋಧಿ ಬಿಜೆಪಿ ಸರಕಾರಕ್ಕೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ: ಇನಾಯತ್ ಅಲಿ

Prasthutha|

► ಕಾಟಿಪಳ್ಳ ಪರಿಸರದಲ್ಲಿ ಇನಾಯತ್ ಅಲಿ ಬಿರುಸಿನ ಪ್ರಚಾರ!

- Advertisement -

ಸುರತ್ಕಲ್: ಮಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿಯವರು ಸೋಮವಾರ ಕಾಟಿಪಳ್ಳ, ಗಣೇಶಪುರ ಪರಿಸರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.


ಈ ವೇಳೆ ಮಾತಾಡಿದ ಅವರು, “ಕಾಂಗ್ರೆಸ್ ನೀಡಿರುವ ಗ್ಯಾರಂಟಿಯೊಂದಿಗೆ ಮತದಾರರನ್ನು ಭೇಟಿಮಾಡಿ ಮತ ಯಾಚಿಸುತ್ತಿದ್ದೇವೆ. ಜನಸಾಮಾನ್ಯರು ಬಿಜೆಪಿ ಸರಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಕೊರೋನ ಮಹಾಮಾರಿಯ ಬಳಿಕ ಆಹಾರ ವಸ್ತು, ಅಗತ್ಯವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು ಜನರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಬಿಜೆಪಿ ನಾಯಕರು ಮಾತ್ರ ಏನೂ ಆಗೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಜನವಿರೋಧಿ ಬಿಜೆಪಿ ಸರಕಾರಕ್ಕೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ” ಎಂದರು.

- Advertisement -


ಸೋಮವಾರ ಬೆಳಗ್ಗೆ ಮುಕ್ಕ ಪ್ರದೇಶದ ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿ ಚರ್ಚಿಸಿದರು. ಗಣೇಶಪುರ ದೇವಸ್ಥಾನ, ಕಾಟಿಪಳ್ಳ ಮಸೀದಿ, ವಿಶ್ವನಾಥ ದೇವಸ್ಥಾನ, ಕೋರ್ದಬ್ಬು ದೈವಸ್ಥಾನಕ್ಕೆ ಭೇಟಿ ನೀಡಿದ ಇನಾಯತ್ ಅಲಿ ಪ್ರಮುಖರ ಜೊತೆ ಚರ್ಚಿಸಿ ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಂಡರು.


ಮಾಜಿ ಮೇಯರ್ ಕವಿತಾ ಸನಿಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಮತ್ತಿತರರು ಜೊತೆಗಿದ್ದರು.



Join Whatsapp