ಮಂಗಳೂರು: ಕೆಫೆಯಲ್ಲಿ ಹುಡುಗಿಯರ ಹೊಡೆದಾಟಕ್ಕೆ ಯುವಕರು ಹೈರಾಣು !

Prasthutha|

ಮಂಗಳೂರು: ಮಂಗಳೂರಿನ ಬಾವುಟಗುಡ್ಡೆಯ ಸಮೀಪದಲ್ಲಿರುವ ಕೆಫೆ ಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೊಡೆದಾಟ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಖಾಸಗಿ ಕಾಲೇಜೊಂದರ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿನಿಯರು ಕೆಫೆಯಲ್ಲಿ  ಬಡಿದಾಡಿರುವ ವೀಡಿಯೋ ಇದೀಗ ಹರಿದಾಡಿದೆ.

- Advertisement -

ನಗರದ ಅಲೋಶಿಯಸ್ ಕಾಲೆಜು ಬಳಿ ಇರುವ ಯೆನ್ ಕೆಫೆಯಲ್ಲಿ ಯುವಕರೊಂದಿಗೆ ಕುಳಿತಿದ್ದ ಯುವತಿಯೋರ್ವಳಿಗೆ ಏಕಾಏಕಿ ಮತ್ತೊಬ್ಬ ಯುವತಿ ಬಂದು ಹಲ್ಲೆ ನಡೆಸಿದ್ದಾಳೆ. ಇದೇ ವೇಳೆ ಮೂರನೇ ಯುವತಿಯೂ ಗಲಾಟೆ ನಡೆಸಿದ್ದು, ಬಿಡಿಸಲು ಹೊರಟ ಯುವಕರು ಹೈರಾಣಾಗಿರುವ ದೃಶ್ಯಗಳು ವೈರಲ್ ಆಗಿದೆ.

- Advertisement -

ಘಟನೆಯ ಕುರಿತು ಮಾಹಿತಿ ಪಡೆಯುತ್ತಿರುವ ಮಂಗಳೂರು ಪೊಲೀಸರು, ಬಂದರು ಪೊಲೀಸ್ ಠಾಣಾ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp