ಮಂಗಳೂರು: ಸಾಮಾಜಿಕ ಕಾರ್ಯಕರ್ತ ಎಂ.ಜಿ. ಮುಹಮ್ಮದ್ ನಿಧ‌ನ

Prasthutha|

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಎಂ.ಜಿ. ಮುಹಮ್ಮದ್ (64) ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

- Advertisement -

ಸೌತ್ ಕರ್ನಾಟಕ ಸಲಫಿ ಮೂವ್‌ ಮೆಂಟ್‌ ನ ದಾವಾ ವಿಭಾಗದ ಕಾರ್ಯದರ್ಶಿಯಾಗಿದ್ದ ಎಂ.ಜಿ. ಮುಹಮ್ಮದ್(64) ಇಂದು ಸೋಮವಾರ ರಾತ್ರಿ ನಿಧನರಾದರು.

ಸುಮಾರು ಎರಡು ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದು, ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದರು.
ಕುರ್‌ ಆನ್ ಬಗ್ಗೆ ಆಳವಾದ ಅಧ್ಯಯನ ಮೂಲಕ ಒಳ್ಳೆಯ ಪ್ರವಚನಕಾರರಾಗಿದ್ದರು. ಸಮಾಜಸೇವಕರಾಗಿದ್ದರು. ಬಡ ರೋಗಿಗಳ ಬಿಲ್ ಪಾವತಿ ವ್ಯವಸ್ಥೆ, ಮೃತದೇಹಗಳ ಸ್ನಾನ, ಕಫನ್ ಮತ್ತಿತರ ಪ್ರಕ್ರಿಯೆ, ರಕ್ತದಾನ ಶಿಬಿರ, ಜಟಿಲ ಕೌಟುಂಬಿಕ, ಆಸ್ತಿ ವಿವಾದಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಸ್ಸೀಮರಾಗಿದ್ದರು.

- Advertisement -

ಮೃತರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Join Whatsapp