ದೆಹಲಿ: ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಪಕ್ಷದ ಕಾರ್ಯಕಾರಿ ಸಮಿತಿ ನಿರ್ಣಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಉಪಕ್ರಮವು ಜಾತಿ ಅಥವಾ ಧರ್ಮದ ಪರಿಗಣನೆಗಳನ್ನು ಆಧರಿಸಿಲ್ಲ. ಬದಲಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಾತಿ ಗಣತಿ ಕುರಿತು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ನಮ್ಮ ಸಿಎಂಗಳು ರಾಜ್ಯಗಳಲ್ಲಿ ಜಾತಿ ಗಣತಿ ನಡೆಸುವ ನಿರ್ಣಯ ಅಂಗೀಕರಿಸಿದ್ದಾರೆ. ಜಾತಿ ಗಣತಿ ಮಾಡುವಂತೆ ಬಿಜೆಪಿಗೆ ಒತ್ತಾಯಿಸುತ್ತೇವೆ, ಮಾಡದಿದ್ದರೆ ನಮಗೇ ಬಿಡಲಿ. ಇಂಡಿಯಾ ಮೈತ್ರಿಕೂಟದ ಬಹುತೇಕ ಮೈತ್ರಿ ಪಾಲುದಾರರು ಜಾತಿ ಗಣತಿಯ ಕಲ್ಪನೆಯನ್ನು ಬೆಂಬಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.