ಮಂಗಳೂರು: NIA ದಾಳಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಪೊಲೀಸ್ ವಶಕ್ಕೆ

Prasthutha|

- Advertisement -

ಮಂಗಳೂರು: NIA ದಾಳಿ ಖಂಡಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಇಂದು ಬೆಳ್ಳಂಬೆಳಗ್ಗೆ ಎಸ್ ಡಿಪಿಐ ಜಿಲ್ಲಾ ಕಚೇರಿ ಮೇಲೆ ಎನ್ ಐಎ ದಾಳಿ ನಡೆಸಿತ್ತು. ವಿಷಯ ತಿಳಿಯುತ್ತಿದ್ದಂತೆ ಎಸ್ ಡಿ ಪಿಐ ಹಾಗೂ ಪಿ ಎಫ್ಐ ಕಾರ್ಯಕರ್ತರು ಜಮಾವನೆಗೊಂಡು ಪ್ರತಿಭಟನೆ ಆರಂಭಿಸಿದ್ದರು. ಆದರೆ ಏಳು ಮೂವತ್ತರ ಸುಮಾರಿಗೆ ಎಲ್ಲಾ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಮನೆಗೆ ತೆರಳಲು ಸೂಚಿಸಿದೆವು. ಆದರೆ ಅವರು ಸ್ಥಳ ಬಿಟ್ಟು ಕದಲಲಿಲ್ಲ. ಬಂದರು ಸೂಕ್ಷ್ಮಪ್ರದೇಶವಾಗಿದ್ದು ಇಲ್ಲಿ ಪ್ರತಿಭಟನೆ ನಡೆಸಿದರೆ ಅನಾಹುತ ಸಾಧ್ಯತೆ ಇರುವುದರಿಂದ ಕೊನೆಗೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಶಶಿಕುಮಾರ್ ತಿಳಿಸಿದರು.

Join Whatsapp