ಮಂಗಳೂರು: ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಮಂಗಳೂರು ವಿವಿ; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ಅತ್ಯಂತ ಕಳಪೆ ಮಟ್ಟದಲ್ಲಿ ವರ್ತಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

- Advertisement -


ಪರೀಕ್ಷೆಯ ಫಲಿತಾಂಶ ನೀಡದೆ ಅಂಕ ಪಟ್ಟಿ ನೀಡದೆ, ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನು ನೀಡುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಬೇಜವಾಬ್ದಾರಿ, ಅಸಡ್ಡೆಯಿಂದ ಉತ್ತರಿಸುತ್ತಾರೆ. ನಾಳೆ ಬನ್ನಿ ನಾಳಿದ್ದು ಬನ್ನಿ ಎಂದು ಹೇಳಿ ಕಾಲಹರಣ ಮಾಡುತ್ತಾರೆ. ವಿಶ್ವವಿದ್ಯಾಲಯಕ್ಕೆ ಕರೆಸಿಕೊಂಡು 10ಗೆ ಪರೀಕ್ಷಾಂಗ ಕುಲಸಚಿವರು ಬರುತ್ತಾರೆ 12 ಗಂಟೆಗೆ ಬರುತ್ತಾರೆ, 2 ಗಂಟೆಗೆ ಬರುತ್ತಾರೆ. 4 ಗಂಟೆಗೆ ಬರುತ್ತಾರೆ ಎಂದು ಸತಾಯಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.


ನಿಮ್ಮ ಒಬ್ಬರ ಸಮಸ್ಯೆ ಅಲ್ಲ 7000 ವಿದ್ಯಾರ್ಥಿಗಳ ಸಮಸ್ಯೆ ಇದೇ ಆಗಿದೆ ಎಂದು ಉಡಾಫೆಯಿಂದ ಉತ್ತರ ನೀಡುವ ಪರೀಕ್ಷಾಂಗ ಕುಲಸಚಿವರು ನೀಡುವ ಅಂಕಪಟ್ಟಿಯಲ್ಲಿ ಅನೇಕ ತಪ್ಪುಗಳು ಇವೆ. ಕೆಲವರಿಗೆ ಅಂಕ ಪಟ್ಟಿ ನೀಡದೆ ಇರುವುದು, ರಿಸಲ್ಟ್ ಅಲ್ಲಿ ತಾಂತ್ರಿಕ ಸಮಸ್ಯೆ, ಪರೀಕ್ಷೆ ಪೇಪರ್ ಮಿಸ್ಸೀಂಗ್, ರೀ ವ್ಯಾಲ್ಯೂವೇಶನ್ ತುಂಬಾ ತಡವಾಗಿ ಆರಂಭಿಸುವುದು, ಪರೀಕ್ಷಾ ದಿನಾಂಕವನ್ನು 1 ತಿಂಗಳ ಮುಂಚಿತವಾಗಿ ನೀಡದೇ ಇರುವುದು, ಪರೀಕ್ಷೆಯ ಶುಲ್ಕ ಪ್ರತಿ ಬಾರಿಯೂ ಹೆಚ್ಚು ಮಾಡುತ್ತಿರುವುದೆಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

- Advertisement -


ನಾವೆಲ್ಲರೂ ನಮ್ಮವರ ಸಮಸ್ಯೆಗೆ ಜೊತೆಯಾಗದೆ ಮೌನವಾಗಿದ್ದೇವೆ.ಏಕೆಂದರೆ ನಮಗೆ ಏನು ಸಮಸ್ಯೆ ಆಗಿಲ್ಲಾ ಎನ್ನುವ ಮನಸ್ಥಿತಿ. ಹೀಗೆ ಮುಂದುವರೆದರೆ ನಾಳೆ ನಮಗೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಿಂದೆ ವಿದ್ಯಾರ್ಥಿಗಳ ಶಕ್ತಿಯ ಮುಂದೆ ಯಾವೂದೂ ಇರಲಿಲ್ಲ. ಪ್ರಸ್ತುತ ಎಲ್ಲಿಯೂ ಅಷ್ಟೂ ಬಲಿಷ್ಠವಾದ ವಿದ್ಯಾರ್ಥಿಗಳ ಹೊರಾಟ , ಸಂಘಟನೆ ಕಾಣಿಸುತ್ತಿಲ್ಲ, ವಿದ್ಯಾರ್ಥಿಗಳ ಸಮಸ್ಯೆಯು ಸಾಮಾನ್ಯವಾಗಿದೆ ಎಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುವ ಸಲುವಾಗಿ ಇಂದು ಕೊಣಾಜೆ ವಿಶ್ವವಿದ್ಯಾಲಯದಲ್ಲಿ ಸೇರಿದ್ದರು.



Join Whatsapp