40% ಕಮಿಷನರ್ ವಿಚಾರದಲ್ಲಿ ಸಾಕ್ಷಿ ಇದ್ದರೆ ಕೊಡಲಿ: ನಳಿನ್ ಕುಮಾರ್

Prasthutha|

ಮಂಗಳೂರು: 40% ಕಮಿಷನರ್ ವಿಚಾರದಲ್ಲಿ ಸಾಕ್ಷಿಗಳು ಏನಿದೆ? ಇದ್ದರೆ ಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ಸರಕಾರದ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.

- Advertisement -

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40% ಕಮಿಷನರ್ ವಿಚಾರದಲ್ಲಿ ಸಾಕ್ಷಿಗಳು ಏನಿದೆ? ಇದ್ದರೆ ಕೊಡಲಿ. ಜಯಮಾಲಾ ಕಾಂಗ್ರೆಸ್ ಗೆ ಹಣ ಕೊಡಲು ಮೊಟ್ಟೆಯಲ್ಲಿ ಹಣ ಮಾಡಿದವರು. ಕಾಂಗ್ರೆಸ್ ಪಕ್ಷ ನೆರೆ ಸಂಗ್ರಹದ ಹಣದಲ್ಲೇ 80% ಲೂಟಿ ಮಾಡಿದ ಪಕ್ಷ. ಈ ಪಕ್ಷಕ್ಕೆ ನೈತಿಕತೆ ಇದ್ರೆ ಸಾಕ್ಷ್ಯ ಕೊಡಲಿ ಎಂದು ಎಚ್ಚರಿಸಿದರು.

ಕೆಂಪಣ್ಣನೂ ಸಾಕ್ಷ್ಯ ಕೊಡಲಿ ಎಂದ ಅವರು, ಕೆಂಪಣ್ಣ ಸುಮ್ಮನೆ ಮಾತನಾಡೋ ಬದಲು ಪುರಾವೆ ಕೊಟ್ಟರೆ ನಾವು ನೋಡ್ತೇವೆ ಎಂದರು. ಮಾಜಿ ಸಚಿವ ಈಶ್ವರಪ್ಪರಿಗೆ ಜೀವ ಭಯದ ಬಗ್ಗೆ ಮಾತಾಡಿದ ನಳಿನ್, ಅವರಿಗೆ ಇಂತಹ ಘಟನೆ ಆಗ್ತಾ ಇರುತ್ತೆ. ಸರ್ಕಾರ ಈಶ್ವರಪ್ಪನವರಿಗೆ ಭದ್ರತೆ ಕೊಡುತ್ತೆ ಎಂದರು.
ಈದ್ಗಾ ಮೈದಾನ ಸರ್ಕಾರಿ ಜಾಗ, ಅಲ್ಲಿ ಗಣೇಶ ಪ್ರತಿಮೆ ಇಡಬಹುದು. ಸ್ಥಳೀಯ ಆಡಳಿತಕ್ಕೆ ಅರ್ಜಿ ಕೊಟ್ಟರೆ ಗಣೇಶೋತ್ಸವಕ್ಕೆ ಅವಕಾಶ ಕೊಡ್ತಾರೆ.

- Advertisement -

ಸರ್ಕಾರಿ ಜಾಗದಲ್ಲಿ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇ ಬೇಕು ಎಂದು ಕಿಡಿ ಕಾರಿದರು.

Join Whatsapp