ಮಂಗಳೂರು: ಹಿರಿಯ ಫಾದರ್ ಗ್ರೆಗೊರಿ ವಿಲಿಯಂ ವಾಸ್ ನಾಳೆ  ಅಂತ್ಯಕ್ರಿಯೆ

Prasthutha|

ಮಂಗಳೂರು: ಬುಧವಾರ ಮಧ್ಯಾಹ್ನ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದ ಹಿರಿಯ ಫಾದರ್ ಗ್ರೆಗೊರಿ ವಿಲಿಯಂ ವಾಸ್  ಅವರ  ಅಂತ್ಯಕ್ರಿಯೆ ಶುಕ್ರವಾರ  ಸಂಜೆ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್ ನಲ್ಲಿ ನಡೆಯಲಿದೆ.

- Advertisement -

ಮಂಗಳೂರು ಡಯೋಸಿಸ್ ಇದರ ಹಿರಿಯ ಪುರೋಹಿತರಲ್ಲಿ ಒಬ್ಬರಾದ ರೆವರೆಂಡ್ ಫಾದರ್ ಗ್ರೆಗರಿ ವಿಲಿಯಂ ವಾಸ್ 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಫಾ.ವಾಸ್ ಅವರು ಮಂಗಳೂರಿನ ಮಿಲಾಗ್ರೆಸ್ ಚರ್ಚ್ ನಲ್ಲಿ ಸಹಾಯಕ ಪಾದ್ರಿಯಾಗಿ,  ಮಂಗಳೂರಿನ ಮಿಲಾಗ್ರೆಸ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

Join Whatsapp