ಜನನ, ಮರಣ ನೋಂದಣಿ ತಿದ್ದುಪಡಿ ವಿರೋಧಿಸಿ ಮಂಗಳೂರು ವಕೀಲರ ಸಂಘದಿಂದ ಪ್ರತಿಭಟನೆ

Prasthutha|

ಮಂಗಳೂರು: ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಂದಿರುವ ತಿದ್ದುಪಡಿ ರದ್ದು ಮಾಡುವಂತೆ ಒತ್ತಾಯಿಸಿ ವಕೀಲರ ಸಂಘದಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

- Advertisement -

ಮಂಗಳೂರಿನ ಕೋರ್ಟು ಆವರಣದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

 ಜನನ ಮತ್ತು ನೋಂದಣಿಯನ್ನು ಕಂದಾಯ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ. ರೆವಿನ್ಯೂ ನ್ಯಾಯಾಲಯ ಮತ್ತು ರೆವಿನ್ಯೂ ಇಲಾಖೆಯಲ್ಲಿ ಕಡತಗಳು ವಿಲೇವಾರಿ ಆಗಲು ತುಂಬ ಕಾಲ ಹಿಡಿಯುತ್ತದೆ. ಅದು ಜನರಿಗೆ ಅನಾನುಕೂಲ. ಆದ್ದರಿಂದ ತಿದ್ದುಪಡಿಯನ್ನು ಹಿಂದೆ ಪಡೆಯಬೇಕು ಎಂದು ಪೃಥ್ವಿರಾಜ್ ರೈ ಒತ್ತಾಯಿಸಿದರು.

- Advertisement -

ಈಗ 144 ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ಸಾಂಕೇತಿಕ ಪ್ರತಿಭಟನೆ ನಡೆಸಿದೆವು. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದೆ ಭಾರೀ ಪ್ರತಿಭಟನೆ ನಡೆಸುವುದಾಗಿ ಶ್ರೀಧರ ಎಣ್ಮಕಜೆ ಹೇಳಿದರು.



Join Whatsapp