ಮಂಗಳೂರು: ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

Prasthutha|

ಮಂಗಳೂರು: ಯುವಕ ಮತ್ತು ಯುವತಿ ಬೈಕಿನಲ್ಲಿ ಹೋಗುತ್ತಿದ್ದಾಗ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.   

- Advertisement -

ಮಂಗಳೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ತಾಲೂಕು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಚ್ಚಿಲ ಜಿಯೋ ಪೆಟ್ರೋಲ್ ಪಂಪ್ ಬಳಿಯಲ್ಲಿ ದಿನಾಂಕ 27-03-2023 ರಂದು ಬೆಳಗಿನ ಜಾವ 5 ಗಂಟೆಯ ವೇಳೆಗೆ ಯುವಕ ಮತ್ತು ಯುವತಿಯ ಜೊತೆಯಲ್ಲಿ ಮೋಟಾರು ಬೈಕ್‌ ನಲ್ಲಿ ಹೋಗುತ್ತಿದ್ದರು. ಈ ವೇಳೆ ಎರಡು ಸ್ಕೂಟರ್ ನಲ್ಲಿ ಬಂದ ಮೂವರು ಆರೋಪಿಗಳು ಅಡ್ಡ ಹಾಕಿ, ಯುವತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಸುಲಿಗೆ ಮಾಡಿದಲ್ಲದೇ, ಮೋಟಾರು ಬೈಕ್ ನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ  ಅಬ್ದುಲ್ಲ ಎಂಬವರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಠಾಣೆಯಲ್ಲಿ ಮೊಕದ್ದಮೆ ನಂಬ್ರ 38/2023 ಕಲಂ 341,354,392 ಜೊತೆಗೆ 34 ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.  

ಪ್ರಕರಣದ ತನಿಖಾವೇಳೆ ಆರೋಪಿಗಳಾದ ಶಾಕೀರ್  (27 ವರ್ಷ), ಮಹಮ್ಮದ್ ಉಬೈದುಲ್ಲಾ (33 ವರ್ಷ), ಇಬ್ರಾಹಿಮ್ ಖಲೀಲ್(22 ವರ್ಷ) ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ 2 ಸ್ಕೂಟರ್ ಗಳು, ಸುಲಿಗೆ ನಡೆಸಿದ್ದ ಐಫೋನ್ ಮೊಬೈಲ್ ಫೋನ್ ಮತ್ತು ಯಮಹಾ ಮೋಟಾರು ಬೈಕ್ ಸ್ವಾಧೀನಪಡಿಸಿಕೊಳ್ಳಲಾಗಿದೆ. ನಂತರ ಪೊಲೀಸರು ಆರೋಪಿಗಳನ್ನು ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಶ್ರೀ ಕುಲದೀಪ್ ಜೈನ್(ಐಪಿಎಸ್) ಅವರ ಮಾರ್ಗದರ್ಶನದ ಮೇರೆಗೆ ಪೊಲೀಸ್‌ ಉಪ ಆಯುಕ್ತರಾದ ಶ್ರೀ ಅಂಶು ಕುಮಾರ್, ಶ್ರೀ ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಧನ್ಯ ಎನ್ ನಾಯಕ್.ಎ.ಸಿ.ಪಿರವರ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನಂದೀಪ್ ಜಿ.ಎಸ್ ಮತ್ತು ಉಪನಿರೀಕ್ಷಕರುಗಳಾದ ಶ್ರೀ ಕೃಷ್ಣ ಕೆ.ಹೆಚ್, ಶ್ರೀ ಸಂತೋಷ್ ಮತ್ತು ಶ್ರೀ ಮಂಜೇಶ್ವರ ಚಂದಾವರ ಮತ್ತು ಉಳ್ಳಾಲ ಪೊಲೀಸ್ ಸಿಬ್ಬಂದಿಗಳಾದ ರಂಜಿತ್ ಕುಮಾರ್,ಪ್ರವೀಣ ಶೆಟ್ಟಿ, ಅಶೋಕ, ಅಕ್ಬರ್, ವಾಸುದೇವ, ಸಾಗರ,ಸತೀಶ್ ಹಾಗು ತಾಂತ್ರಿಕ ಸಿಬ್ಬಂದಿ ಮನೋಜ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸಿದ್ದಾರೆ.



Join Whatsapp