ರಾಮ ನವಮಿ ಮೆರವಣಿಗೆ ಹಿನ್ನೆಲೆ| ಮಸೀದಿ ಕಟ್ಟಡಗಳನ್ನು ಬಟ್ಟೆಯಿಂದ ಮುಚ್ಚಿದ ಪೊಲೀಸರು!

Prasthutha|

ಹೈದರಾಬಾದ್: ರಾಮನವಮಿ ಮೆರವಣಿಗೆ ವೇಳೆ ಸಂಘಪರಿವಾರ ಮುಸ್ಲಿಮರ ಮಸೀದಿಗಳ ಮೇಲೆ ದಾಳಿ ನಡೆಸುವ ಸಂಭವ ಇದೆ ಎಂದು ಮಸೀದಿ ಕಟ್ಟಡಗಳನ್ನು ಪೊಲೀಸರು ಬಟ್ಟೆಯಿಂದ ಮುಚ್ಚಿದ್ದಾರೆ.

- Advertisement -

ದ್ವೇಷದ ಭಾಷಣಕಾರ ಹಾಗೂ ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ರಾಜಾ ಸಿಂಗ್ ರಾಮನವಮಿ ಮೆರವಣಿಗೆಯನ್ನು ಮುನ್ನಡೆಸಲಿದ್ದು, ನಿರಂತರವಾಗಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡುತ್ತಿರುವ ರಾಜಾ ಸಿಂಗ್ ಅವರ ಬೆಂಬಲಿಗರು ಮಸೀದಿಗಳ ಮೇಲೆ ದಾಳಿ ಮಾಡುವ ಸಂಭವ ಇದೆ ಎಂದು ಸಿದ್ಧಿಯಾಂಬರ್ ಬಜಾರ್ ಮಸೀದಿ ಮತ್ತು ದರ್ಗಾವನ್ನು ಬಟ್ಟೆಯಿಂದ ಮುಚ್ಚಲಾಗಿದೆ.

ನಾಳೆ(ಗುರುವಾರ) ಬೆಳಗ್ಗೆ ಒಂಬತ್ತು ಗಂಟೆಗೆ ಸೀತಾರಾಂಬಾಗ್ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಕೋಟಿ ಹನುಮಾನ್ ಮೈದಾನದಲ್ಲಿ ಮೆರವಣಿಗೆ ಸಮಾರೋಪಗೊಳ್ಳಲಿದೆ. ಮೆರವಣಿಗೆಯು ಭೋಯಿಗುಡ ಕಮಾನ್, ಮಂಗಲ್ಹಟ್ ಪೊಲೀಸ್ ಠಾಣೆ ರಸ್ತೆ, ಜಾಲಿ ಹನುಮಾನ್, ಧುಲ್ಪೇಟ್ ಪುರಾಣಪುಲ್ ರಸ್ತೆ, ಗಾಂಧಿ ಪ್ರತಿಮೆ, ಜುಮೇರಾ ಬಜಾರ್, ಬೇಗಂ ಬಜಾರ್ ಛತ್ರಿ, ಸಿದ್ಧಿಯಾಂಬರ್ ಬಜಾರ್, ಶಂಕರ್ ಶೇರ್ ಹೋಟೆಲ್, ಗೌಳಿಗುಡ ಚಮನ್, ಪುತ್ಲಿಬೌಲಿ ಕ್ರಾಸ್ರೋಡ್ಸ್ ಮತ್ತು ಸುಲ್ತಾನ್ ಬಜಾರ್ ಮೂಲಕ ಸಾಗಲಿದೆ. ಈ ಪ್ರದೇಶಗಳಲ್ಲಿರುವ ಮಸೀದಿಗಳು ಮತ್ತು ದರ್ಗಾಗಳನ್ನು ಬಟ್ಟೆಯಿಂದ ಮುಚ್ಚಲಾಗಿದೆ.

- Advertisement -


ಕಳೆದ ವರ್ಷ ನಡೆದ ರಾಮನವಮಿ ಮೆರವಣಿಗೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಶಾಹಿನಾಯತ್ ಗುಂಜ್ ಪೊಲೀಸರು ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ರಾಜಾಸಿಂಗ್ ವಿರುದ್ಧ ಹಲವು ಪ್ರಕರಣಗಳಿದ್ದರೂ ಪೊಲೀಸರು ಈ ಬಾರಿ ಮೆರವಣಿಗೆಗೆ ಅನುಮತಿ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಈ ಬಾರಿ ರಾಮನವಮಿ ಮೆರವಣಿಗೆ ರಂಜಾನ್ ನಲ್ಲಿಯೇ ಇರುವುದರಿಂದ ಸಂಘರ್ಷದ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.


ಹೈದರಾಬಾದ್ ನಲ್ಲಿ ಕಳೆದ ಬಾರಿ ನಡೆದ ರಾಮ ನವಮಿ ಮೆರವಣಿಗೆಯಲ್ಲಿ ಭಾಷಣ ಮಾಡಿದ್ದ ರಾಜಾಸಿಂಗ್, ಮುಸ್ಲಿಮರನ್ನು ಬಹಿಷ್ಕರಿಸಲು ಹಿಂದೂಗಳಿಗೆ ಕರೆ ನೀಡಿದ್ದರು. “ಹಿಂದೂಗಳು ಬಹಿಷ್ಕಾರ ಘೋಷಿಸಿದರೆ ಮುಸಲ್ಮಾನರಿಗೆ ಭಿಕ್ಷೆಯೂ ಸಿಗುವುದಿಲ್ಲ, ಹಿಂದೂಗಳು ಎಚ್ಚೆತ್ತುಕೊಂಡರೆ ಮುಸ್ಲಿಮರು ಸರ್ವ ನಾಶವಾಗುತ್ತಾರೆ” ಎಂದು ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

Join Whatsapp