ಮಂಗಳೂರು: ಉಚಿತ ಕೋರ್ಸ್ ನೀಡುವುದಾಗಿ ನಂಬಿಸಿ ಹಣ ಪಡೆದು ವಿದ್ಯಾರ್ಥಿಗಳನ್ನು ವಂಚಿಸಿದ ಪ್ರಕರಣದಲ್ಲಿ ಸಿಮ್ರಾನ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯಸ್ಥೆ ಹಾಗೂ ಪ್ರಿನ್ಸಿಪಾಲ್ ಸಜೀಳ ಕೋಲಾ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಉಚಿತ ಫ್ಯಾಷನ್ ಡಿಸೈನಿಂಗ್, ಬ್ಯುಟಿಕ್ ಮ್ಯಾನೇಜ್ಮೆಂಟ್, ಟೈಲರಿಂಗ್ ಕೋರ್ಸ್ ನೀಡುವುದಾಗಿ ನಂಬಿಸಿ ಹಣ ಪಡೆದು ಸಿಮ್ರಾನ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯಸ್ಥೆ ಹಾಗೂ ಪ್ರಿನ್ಸಿಪಾಲ್ ಸಜೀಳ ಕೋಲಾ ವಿದ್ಯಾರ್ಥಿಗಳನ್ನು ವಂಚಿಸಿದ್ದು, ಇದೀಗ ತಲೆಮರೆಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ನಗರದ ಬಂದರಿನ ಬದ್ರಿಯಾ ಬಿಲ್ಡಿಂಗ್ ನಲ್ಲಿರುವ ಸಿಮ್ರಾನ್ ಇನ್ಸ್ಟಿಟ್ಯೂಟ್ ಸಂಸ್ಥೆಗೆ ಫಿರ್ಯಾದಿದಾರರಾದ ರೌದಾ ಹಲೀಮಾ ಸೇರಿದಂತೆ ಇತರ 43 ವಿದ್ಯಾರ್ಥಿಗಳು ಹೋದಾಗ ಸದ್ರಿ ಸಂಸ್ಥೆಯ ಪ್ರಿನ್ಸಿಪಾಲ್ ಆದ ಸಜಿಲಾ ಕೋಲಾ ಎಂಬವರು ನಮ್ಮ ಸಂಸ್ಥೆಯಲ್ಲಿ ಕರ್ನಾಟಕ ಕೌಶಲ್ಯ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ಯಾಶನ್ ಡಿಸೈನಿಂಗ್, ಬ್ಯುಟಿಕ್ ಮ್ಯಾನೇಜ್ ಮೆಂಟ್, ಟೈಲರಿಂಗ್, ಆರಿ ಎಂಬ್ರಾಯಿಡರಿ, ಮೇಕಪ್ ಆರ್ಟಿಸ್ಟ್ ಕೋರ್ಸ್, ಸೆಲ್ಫ್ ಎಂಪ್ಲಾಯ್ ಟ್ರೈಲರ್ ಕೋರ್ಸ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಆರೋಪಿ (A1) ಸಜಿಲಾ ಕೋಲಾ ರವರ ಮಾತನ್ನು ನಂಬಿ ಫಿರ್ಯಾದಿದಾರರಾದ ರೌದಾ ಹಲೀಮಾರವರು ಹಾಗು ಇತರ 43 ವಿದ್ಯಾರ್ಥಿಗಳು ಫ್ಯಾಶನ್ ಡಿಸೈನಿಂಗ್ ಕೋರ್ಸ್ ಹಾಗು ಇತರ ಕೋರ್ಸ್ ಗಳಿಗೆ ಜಾಯಿನ್ ಆಗುವುದಾಗಿ ತಿಳಿಸಿದಾಗ, ಆರೋಪಿ (A1) ಸಜಿಲಾ ಕೋಲಾ ರವರು ಫಿರ್ಯಾದಿದಾರರು ಹಾಗು ಇತರ 43 ವಿಧ್ಯಾರ್ಥಿಗಳಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಹಾಗು ಇತರ ಕೋರ್ಸ್ ಗಳಿಗೆ 1,50,000/- ರೂಪಾಯಿ ಫೀಸ್ ಆಗಿದ್ದು, ನಿಮಗೆ 32,000/-ರೂಪಾಯಿಯಲ್ಲಿ ಕಲಿಸಿಕೊಡುತ್ತೇವೆ. ನೀವು ಇಂದೇ ಫೀಸ್ ಹಣ ಕಟ್ಟಬೇಕು, ಕಟ್ಟದಿದ್ದರೆ ನಿಮಗೆ ಗೌವರ್ನಮೆಂಟ್ ಸೀಟ್ ಸಿಗುವುದಿಲ್ಲ ಎಂದು ಹೇಳಿದ್ದರಿಂದ ಪಿರ್ಯಾದಿದಾರರು ಹಾಗು ಇತರ 43 ವಿಧ್ಯಾರ್ಥಿಗಳು ವಿವಿಧ ದಿನಾಂಕದಂದು ಹಣವನ್ನು ನಗದಾಗಿ ಕೊಟ್ಟು ರಶೀದಿ ಪಡೆದಿರುತ್ತಾರೆ ಹಾಗು ವಿವಿಧ ದಿನಾಂಕದಂದು ಹಣವನ್ನು ಸಜಿಲಾ ಕೋಲಾ ರವರ ಫೋನ್ ನಂಬರಿಗೆ ಗೂಗಲ್ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿರುತ್ತಾರೆ, ಹೀಗೆ 44 ವಿಧ್ಯಾರ್ಥಿಗಳೊಡನೆ ಒಟ್ಟು Rs.8,10,000/- ಹಣವನ್ನು ಪಡೆದಿರುತ್ತಾರೆ.
2021 ನೇ ಡಿಸೆಂಬರ್ ನಿಂದ ಕೋರ್ಸ್ ಪ್ರಾರಂಭವಾಗಿತ್ತು, 2022 ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಛೇರಿಯ ಅಧಿಕಾರಿಗಳು ಸದ್ರಿ ಸಂಸ್ಥೆಗೆ ಬಂದ ಸಮಯ ಸದ್ರಿ ಸಿಮ್ರಾನ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ದಿನಾಂಕ 04-08-2022 ರಿಂದ ಕರ್ನಾಟಕ ಕೌಶಲ್ಯ ಯೋಜನೆಯ ಅಡಿಯಲ್ಲಿ ತರಬೇತಿ ಪ್ರಾರಂಭವಾಗಿರುವುದೆಂದು, ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದೆಂದು ಪಿರ್ಯಾದಿದಾರರು ಹಾಗು ಇತರ 43 ವಿಧ್ಯಾರ್ಥಿಗಳಿಗೆ ತಿಳಿದು, ಅನುಮಾನ ಬಂದಿದ್ದರಿಂದ ಪಾವತಿ ಮಾಡಿದ ಪೂರ್ತಿ ಮೊತ್ತಕ್ಕೆ ರಶೀದಿ ಕೇಳಿದಾಗ, ಆರೋಪಿ (A1) ಸಜಿಲಾ ಕೋಲಾ, ಪಿರ್ಯಾದಿದಾರರು ಹಾಗು ಇತರ 43 ವಿಧ್ಯಾರ್ಥಿಗಳಲ್ಲಿ, ರಶೀದಿ ನೀಡಲು ಸಾಧ್ಯವಿಲ್ಲ, ಒಂದುವೇಳೆ ನಿಮಗೆ ರಶೀದಿ ನೀಡಬೇಕಾದರೆ ನೀವು ಸರ್ಕಾರಕ್ಕೆ ರೂ. 15,000/- ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂಬುವುದಾಗಿ ಪಿರ್ಯಾದಿದಾರರು ಹಾಗು ಇತರ 43 ವಿಧ್ಯಾರ್ಥಿಗಳನ್ನು ಬೆದರಿಸಿರುತ್ತಾರೆ. ಹಾಗೆಯೇ ಆ ಬಳಿಕ ಆರೋಪಿ (A1) ಸಜಿಲಾ ಕೋಲಾ ಪಿರ್ಯಾದಿದಾರರು ಹಾಗು ಇತರ 43 ವಿದ್ಯಾರ್ಥಿಗಳಿಗೆ ತರಬೇತಿ ಕೂಡ ಕೊಡದೇ ಹಾಗೂ ಹಣವನ್ನು ವಾಪಾಸು ಕೊಡದೇ ಮೋಸ ಮಾಡಿರುತ್ತಾರೆ. ಸದ್ರಿ, “ಸಿಮ್ರಾನ್” ಎನ್ನುವ ಇನ್ಸ್ಟಿಟ್ಯೂಟ್ ನಲ್ಲಿ ಸರಕಾರದ ಅನುಮೋದನೆಯೊಂದಿಗೆ ಮಹಿಳೆಯರಿಗೆ ಉಚಿತವಾಗಿ ತರಬೇತಿಗಳನ್ನು ನೀಡುವುದಾಗಿ ನಂಬಿಸಿ, ಪಿರ್ಯಾದಿದಾರರು ಹಾಗು ಇತರ 43 ವಿಧ್ಯಾರ್ಥಿಗಳಿಂದ ಹಣ ಪಡೆದು ಸರಿಯಾಗಿ ತರಬೇತಿಯನ್ನು ನೀಡದೇ ವಿಧ್ಯಾರ್ಥಿಗಳಿಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿ ವಂಚಿಸಿದ್ದಾರೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 33/2023 ರಲ್ಲಿ ಐಪಿಸಿ ಸೆಕ್ಷನ್ 406 ಹಾಗು 420 ಅಡಿಯಲ್ಲಿ ಎಫ್ಐಅರ್ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯ ಆರೋಪಿ (A1) ಸಿಮ್ರಾನ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯಸ್ಥೆ ಹಾಗು ಪ್ರಿನ್ಸಿಪಾಲ್ ಸಜೀಳ ಕೋಲಾ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಆರೋಪಿ (A1) ಸಜಿಲಾ ಕೋಲಾ ರವರ ಅರ್ಜಿಯನ್ನು ದಿನಾಂಕ 29/04/2023 ರಂದು 3ನೇ ಜಿಲ್ಲಾ ಹಾಗು ಸೆಷನ್ಸ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್ ಎಸ್ ರವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ನೀಡಿದ್ದಾರೆ, ಈ ಆದೇಶದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ (A1) ಸಜಿಲಾ ಕೋಲಾ ರವರ ಬಂಧನಕ್ಕೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಲೆಬೀಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಪಿರ್ಯಾದಿದಾರರಾದ ರೌದ ಹಲೀಮಾ ಹಾಗು ನೊಂದ ಇತರ 43 ವಿದ್ಯಾರ್ಥಿಗಳ ಪರವಾಗಿ ಮಂಗಳೂರು ನಗರದ ಯುವ ವಕೀಲರಾದ ಸಿನಾನ್ ಸಿದ್ದೀಕ್ ರವರು ನ್ಯಾಯಾಲಯದ ಮುಂದೆ ತಮ್ಮ ವಾದಮಂಡಿಸಿದ್ದರು. ಇದರಿಂದ ಮೊದಲನೇ ಹಂತದಲ್ಲಿ ನೊಂದ ವಿಧ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದರಲ್ಲಿ ಯುವ ವಕೀಲರಾದ ಸಿನಾನ್ ಸಿದ್ದೀಕ್ ರವರು ಸಫಲರಾಗಿದ್ದಾರೆ.