ಸೌದಿ ಅರೇಬಿಯಾ ಜುಬೈಲ್ ನಲ್ಲಿ ಮಂಗಳೂರು ಯೂತ್ ಫೆಡರೇಷನ್ ( MYF) ಅಸ್ತಿತ್ವಕ್ಕೆ

Prasthutha|

ಜುಬೈಲ್: ಸಾಮುದಾಯಿಕ ಅಭಿವೃದ್ದಿಯ ಹಿತದೃಷ್ಟಿಯಿಂದ ಮಂಗಳೂರು ನಗರದ ಆಸುಪಾಸಿನ ಅನಿವಾಸಿ ಗಳ ಸಂಘಟಿತ ಸಂಸ್ಥೆಯಾದ ಎಮ್ ವೈ ಎಫ್ ಸಂಸ್ಥೆಯು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಆರಂಭವಾಯಿತು.

- Advertisement -


ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾರ್ಥಿವೇತನ, ತೀರಾ ಬಡವರಿಗೆ ಅವಶ್ಯಕವಾದ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಹಲವಾರು ದೂರದೃಷ್ಟಿಗಳನ್ನು ಇಟ್ಟುಕೊಂಡು ಸಮಾಜದ ಅಭಿವೃದ್ದಿಗೋಸ್ಕರ ಆರಂಭಿಸಲಾದ ಈ ಸಂಸ್ಥೆಯನ್ನು ದಿನಾಂಕ 18, ನವೆಂಬರ್ 2023 ಶನಿವಾರ ಜುಬೈಲ್ ನಲ್ಲಿ ಅಧಿಕೃತವಾಗಿ ಸಮಿತಿರಚನೆ ಮಾಡುವ ಮೂಲಕ ಆರಂಭಿಸಲಾಯಿತು

ಎಮ್ ವೈ ಏಫ್ ಸ್ಥಾಪಕ ಅದ್ಯಕ್ಷರಾಗಿ ಫಹೀಂ ಆಖ್ತರ್ , ಪ್ರಧಾನ ಕಾರ್ಯದರ್ಶಿಯಾಗಿ ಶಾನಾವಾಝ್, ಜೊತೆ ಕಾರ್ಯದರ್ಶಿಯಾಗಿ ಶಿಹಾಬ್ ಬಂದರ್, ಉಪಾಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಕುದ್ರೋಳಿ ಮತ್ತು ಅಶ್ಫಾಕ್ ಇಬ್ರಾಹಿಂ, ಆಯ್ಕೆಯಾದರು ಹಾಗೂ ಸಲಹೆಗಾರರಾಗಿ ಮುಶ್ತಾಖ್ ಮತ್ತು ಸಿರಾಜ್ ರವರನ್ನು ಆಯ್ಕೆ ಮಾಡಲಾಯಿತು.

- Advertisement -

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಫಝಾಬ್ ,ಮುನೀರ್ ಕಂದಕ್,ತನ್ ಝೀಲ್ ಐಮಾನ್ , ಮುಹಮ್ಮದ್ಅಶ್ರಫ್,
ಆರಿಫ್,ಮನ್ ಝರ್, ಝಿಯಾವುಲ್ ರಹ್ಮಾನ್,ಅಬ್ದುಲ್ ನಿಹಾನ್, ಮುಹಮ್ಮದ್ ತೌಫೀಖ್ ರವರನ್ನು
ಆರಿಸಲಾಯಿತು.

ಮಂಗಳೂರು ಪರಿಸರದ ಆಸುಪಾಸಿನ ಕುದ್ರೋಳಿ, ಬಂದರ್ , ಬೆಂಗರೆ, ಪಾಂಡೇಶ್ವರ ಬಿಜೈ ಮುಂತಾದ ಪ್ರದೇಶಗಳ ಅನಿವಾಸಿಗಳ ಒಕ್ಕೂಟವಾದ ಎಮ್ ವೈ ಎಫ್ ಮುಂಬರವ ದಿನಗಳಲ್ಲಿ ಸಾಮಾಜಿಕ ಸೇವೆಗಳ ಮೂಲಕ ಮಂಗಳೂರು‌ ಪರಿಸರದ ಅರ್ಹ ಫಲಾನುಭವಿಗಳ ಪಾಲಿನ ಆಶಾಕಿರಣವಾಗಲಿದೆ ಎಂದು ಸಂಸ್ಥೆಯ ಪಧಾಧಿಕಾರಿಗಳು‌ ತಿಳಿಸಿದ್ದಾರೆ

Join Whatsapp