ಮಂಗಳೂರು: ಕೃಷಿ ಅಧ್ಯಯನಕ್ಕೆಂದು ತೆರಳಿದ್ದ ಯುವ ವೈದ್ಯೆ ಕೆರೆಯಲ್ಲಿ ಮುಳುಗಿ ಸಾವು

Prasthutha|

ಮಂಗಳೂರು: ಕೃಷಿ ಅಧ್ಯಯನಕ್ಕೆಂದು ತೆರಳಿದ್ದ ಯುವ ವೈದ್ಯೆ, ಮಾಡೆಲ್ ಫಾರ್ಮ್ ಹೌಸ್ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೇವು ಗ್ರಾಮದಲ್ಲಿ ನಡೆದಿದೆ.

ಡಾ.ಮೈಜೀ ಕರೋಲ್ ಫರ್ನಾಂಡಿಸ್ (31 ವರ್ಷ) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಮೈಜೀ ಸಾವಿನ ಬಗ್ಗೆ ಆಕೆಯ ಸಹೋದರಿ ಡಯಾನ ದೂರು ನೀಡಿದ್ದಾರೆ.

- Advertisement -

ಮಂಗಳೂರಿನ ಪ್ರಶಾಂತನಗರ ನಿವಾಸಿ ಮೈಜೀ ವೈದ್ಯಕೀಯ ಶಿಕ್ಷಣ ಮುಗಿಸಿ ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ಮೈಜೀ, ಈಜುವಾಗ ಆಯ ತಪ್ಪಿ ಮುಳುಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -