ಮಂಗಳೂರು | ಉಗ್ರ ಸಂಘಟನೆ ನಂಟು ಆರೋಪ: ಯುಎಪಿಎಯಡಿ ಮೂವರು ಯುವಕರ ಬಂಧನ

Prasthutha|

ಮಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ ಆರೋಪದಲ್ಲಿ ಮೂವರು ಯುವಕರನ್ನು ಯುಎಪಿಎಯಡಿ ಬಂಧಿಸಲಾಗಿದೆ.

- Advertisement -


ತೀರ್ಥಹಳ್ಳಿ ಸೊಪ್ಪುಗುಡ್ಡೆ ಶಾರೀಕ್ ಮತ್ತು ಆತನ ಸಹಚರರಾದ ಮಂಗಳೂರು ಮಾಜ್ ಮುನೀರ್ ಅಹಮ್ಮದ್ (22) ಹಾಗೂ ಶಿವಮೊಗ್ಗ ಸಿದ್ದೇಶ್ವರ ನಗರ ಸಯ್ಯದ್ ಯಾಸೀನ್ (21) ಎಂಬವರು ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣದಿಂದಾಗಿ ಇವರ ವಿರುದ್ಧ ಸೆ.19ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ UNLAWFUL ACTIVITIES (PREVENTION) ACT, 1967 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಪ್ರಕರಣದ ತನಿಖೆ ಕೈಗೊಂಡ ವಿಶೇಷ ತನಿಖಾ ತಂಡವು ಆರೋಪಿತರಾದ ಮಾಜ್ ಮುನೀರ್ ಅಹಮ್ಮದ್ , ಮತ್ತು ಸಯ್ಯದ್ ಯಾಸೀನ್ ಅವರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದ ನಂತರ ಸೆ. 20 ರಿಂದ 29-09-2022ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ. ಹೆಚ್ಚಿನ ತನಿಖೆ ಕೈಗೊಂಡಿದ್ದು, ಮುಂದುವರೆದ ಮಾಹಿತಿಯನ್ನು ನೀಡಲಾಗುವುದು.

- Advertisement -



Join Whatsapp