ಫೇಸ್ ಬುಕ್ ಪೋಸ್ಟ್ ಮೂಲಕ ಧರ್ಮ ನಿಂದನೆ; ಯುವಕನ ಬಂಧನ

Prasthutha|

► ಆರೋಪಿಯ ವಿರುದ್ಧ ದೂರು ನೀಡಿದ ಪಿಎಫ್ಐ

- Advertisement -


ಇಡುಕ್ಕಿ: ಫೇಸ್ ಬುಕ್ ಪೋಸ್ಟ್ ಮೂಲಕ ಪ್ರವಾದಿ ಮತ್ತು ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಇಡುಕ್ಕಿಯಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು ಆಡಿಮಾಲಿ ನಿವಾಸಿ ಜೋಶಿ ಥಾಮಸ್ (39) ಎಂದು ಗುರುತಿಸಲಾಗಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಕೆಲಸಗಾರನಾಗಿರುವ ಈತ ಸಾಮಾಜಿಕ ಜಾಲತಾಣಗಳ ಮೂಲಕ ಇತರ ಧರ್ಮಗಳನ್ನು ಅವಮಾನಿಸುವ ಚಾಳಿ ಹೊಂದಿದ್ದ ಎನ್ನಲಾಗಿದೆ.


ಕೆಲ ದಿನಗಳ ಹಿಂದೆ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರವಾದಿ ನಿಂದನೆ ಮಾಡಿದ್ದ ಈತನ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದು, ಈ ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಹಲವರು ಆತನಿಗೆ ಕಾಮೆಂಟ್ ಮೂಲಕ ತಿಳಿಸಿದ್ದರು. ಆದರೆ ಜೋಶಿ ಥಾಮಸ್ ಅದನ್ನು ನಿರ್ಲಕ್ಷಿಸಿದ ಕಾರಣ ಆಡಿಮಾಲಿಯ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದರು.

- Advertisement -


ದೂರಿನ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಡಿಮಾಲಿ ಸಿಐ ಕ್ಲೀಟಸ್ ಕೆ ಜೋಸೆಫ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.



Join Whatsapp