ಮಂಗಳೂರು | ಲಾಡ್ಜ್ ನಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ: ಕಾರಣ ನಿಗೂಢ

Prasthutha|

ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿಯ ಇಂಟರ್ ಸಿಟಿ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ,

ಬಂಟ್ವಾಳದ ಗುರುಪ್ರಸಾದ್ (36) ಎಂದು ಗುರುತಿಸಲಾಗಿದ್ದು, ಮೂರು ದಿನಗಳದರೂ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟಿದ್ದು ಕಂಡುಬಂದಿದೆ.

- Advertisement -

ಗುರುಪ್ರಸಾದ್ ಅವರ ಮೃತದೇಹವು ರಕ್ತ ಸಿಕ್ತವಾಗಿದ್ದು, ಮೈಮೇಲೆ ಗಾಯಗಳಿದ್ದು, ಇದೊಂದು ಕೊಲೆಯೇ ಅಥವಾ ಇನ್ನಿತರ ಕಾರಣಗಳಿಂದ ಮೃತಪಟ್ಟಿರಬಹುದೇ ಎಂದು ಅನುಮಾನಗಳಿದ್ದು, ಪೊಲೀಸರ ತನಿಖೆಯಿಂದ ನಿಜಾಂಶ ಬೆಳಕಿಗೆ ಬರಬೇಕಾಗಿದೆ.

ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -