ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 3500 ಕೋಟಿ ರೂ ಬದಲು 900 ಕೋಟಿ: ಬಿ.ಎಂ ಫಾರೂಕ್, ನಸೀರ್ ಅಹ್ಮದ್ ತರಾಟೆ

Prasthutha|

ಬೆಂಗಳೂರು; ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ
ವಿಧಾನಪರಿಷತ್ನಲ್ಲಿ ಸದಸ್ಯರಾದ ಬಿ.ಎಂ. ಫಾರೂಕ್ ಮತ್ತು ನಸೀರ್ ಅಹಮ್ಮದ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2016-17ರಲ್ಲಿ 141 13 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, 112.20 ಕೋಟಿ ಖರ್ಚಾಗಿದೆ. 2017-18ರಲ್ಲಿ 174.27 ಕೋಟಿ ಬಿಡುಗಡೆಯಾಗಿದ್ದು” 172.82 ಕೋಟಿ ಖರ್ಚಾಗಿದೆ. 2018-19ರಲ್ಲಿ 174.86 ಕೋಟಿ ಅನುದಾನ ನೀಡಿದ್ದು, 168.94 ಕೋಟಿ ಖರ್ಚಾಗಿದೆ. 2019-20ರಲ್ಲಿ 142.39 ಕೋಟಿ ಬಿಡುಗಡೆಯಾಗಿದ್ದು, 138.82 ಕೋಟಿ ಖರ್ಚಾಗಿದೆ. 2020-21 ರಲ್ಲಿ 75.18 ಕೋಟಿ ಬಿಡುಗಡೆಯಾಗಿದ್ದು, 73.49 ಕೋಟಿ ಖಾರ್ಚಾಗಿದೆ ಎಂದು ವಿವರ ನೀಡಿದರು.

- Advertisement -


ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲಾಗುವುದು. ಕೋವಿಡ್ ನಂತರ ಆರ್ಥಿಕ ಪರಿಸ್ಥಿತಿ ಆಧರಿಸಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಆದರೆ, ಸದಸ್ಯರು ಇದನ್ನು ಒಪ್ಪದೆ ಈ ಮೊದಲು ಇಲಾಖೆಗೆ 3500 ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಈಗ 900 ಕೋಟಿಗೆ ಇಳಿಸಲಾಗಿದೆ. ನಿಗಮಕ್ಕೆ ಅನುದಾನದಲ್ಲೂ ಕಡಿತ ಮಾಡಲಾಗಿದೆ. ಶೇ.14ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Join Whatsapp