ಮಂಗಳೂರು | ದೇವಸ್ಥಾನ/ ದೈವಸ್ಥಾನಗಳಲ್ಲಿ ಕಳ್ಳತನ ಪ್ರಕರಣ: ಇಬ್ಬರು ಸೆರೆ

Prasthutha|

►ನಾಗ ನಾಯಕ್, ಮಾರುತಿ ಬಂಧಿತ ಆರೋಪಿಗಳು

- Advertisement -

ಮಂಗಳೂರು: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಬೈರಪುರದ ನಾಗ ನಾಯಕ್ (55) ಮತ್ತು ದಾವಣಗೆರೆ ಜಿಲ್ಲೆಯ ಮಾರುತಿ.ಸಿ.ವಿ (33) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

- Advertisement -

 ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿ ಕುಮಾರ್ ನಗರ ವ್ಯಾಪ್ತಿಯಲ್ಲಿನ ದೇವಸ್ಥಾನ/ ದೈವಸ್ಥಾನ ಮತ್ತು ಮೂರು ಮನೆಗಳಲ್ಲಿ ಕಳ್ಳತನ ನಡೆಸಿದ ಇಬ್ಬರನ್ನು ಡಿ. 3 ರಂದು ಬಂಧಿಸಲಾಗಿದೆ. ಪ್ರಮುಖ ಆರೋಪಿ ನಾಗ ನಾಯ್ಕ, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಿಚಾರಣೆ ವೇಳೆಯಲ್ಲಿ 2018ರಿಂದ ಮಂಗಳೂರಿನ ಹಲವು ದೇವಸ್ಥಾನ/ ದೈವಸ್ಥಾನಗಳಲ್ಲಿ ತಾನು ನಡೆಸಿದ ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿಸಿದರು.

Join Whatsapp