ಮಂಗಳೂರು: ಶಾಪಿಂಗ್ ಕಾಂಪ್ಲೆಕ್ಸ್’ನಲ್ಲಿ ಭಾರಿ‌ ಬೆಂಕಿ ಅವಘಡ

Prasthutha|

ಮಂಗಳೂರು: ತೊಕ್ಕೊಟು ಸಮೀಪದ ಚೆಂಬುಗುಡ್ಡೆ ಮಸೀದಿ ಅಧೀನದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್’ನಲ್ಲಿ ಶನಿವಾರ ರಾತ್ರಿ ಭಾರಿ ಅಗ್ನಿ ದುರಂತ ಸಂಭವಿಸಿದೆ.
ಕಟ್ಟಡದ ಸಮೀಪವೇ ಮೆಸ್ಕಾಂ ಕಚೇರಿ ಇದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -


ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಏರಿದ್ದು, ಸುತ್ತಲೂ ಭಾರೀ ಹೊಗೆ ಆವರಿಸಿದೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ‌ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Join Whatsapp