1000 ಸಿಬ್ಬಂದಿಯನ್ನು ವಜಾ ಗೊಳಿಸಿದ ವ್ಲಾಡಿಮಿರ್ ಪುಟಿನ್ ! ಕಾರಣವೇನು ಗೊತ್ತಾ ?

Prasthutha|

ಮಾಸ್ಕೋ: ಅಂಗರಕ್ಷಕರು, ಅಡುಗೆಯವರು ಸೇರಿದಂತೆ ತನ್ನ ಸೇವೆಗಾಗಿ ನಿಯುಕ್ತರಾಗಿದ್ದ ಒಂದು ಸಾವಿರ ಸಿಬ್ಬಂದಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರ್ತವ್ಯದಿಂದ ವಜಾಗೊಳಿಸಿದ್ದಾರೆ ಎಂದು ‘ದಿ ಡೈಲಿ ಬೀಸ್ಟ್’ ವರದಿ ಮಾಡಿದೆ.
ತನಗೆ ನೀಡಲಾಗುವ ಆಹಾರದಲ್ಲಿ ವಿಷವನ್ನು ಸೇರಿಸುವ ಸಾಧ್ಯತೆ ಇದೆ ಎಂಬ ಭಯದಿಂದ ಫೆಬ್ರವರಿ’ಯಲ್ಲಿ ಒಂದು ಸಾವಿರ ವೈಯಕ್ತಿಕ ಸಿಬ್ಬಂದಿಯನ್ನು ಪುಟಿನ್ ವಜಾಗೊಳಿಸಿದ್ದು, ವಜಾಗೊಂಡವರಲ್ಲಿ ಅಂಗರಕ್ಷಕರು, ಅಡುಗೆಯವರು, ಲಾಂಡರ್‌ಗಳು ಮತ್ತು ಕಾರ್ಯದರ್ಶಿಗಳು ಸೇರಿದ್ದಾರೆ ಎಂದು ರಷ್ಯಾದ ಸರ್ಕಾರದ ಮೂಲವನ್ನು ಉಲ್ಲೇಖಿಸಿ ದಿ ಡೈಲಿ ಬೀಸ್ಟ್ ವರದಿ ಮಾಡಿದೆ.

- Advertisement -

ಉಕ್ರೇನ್‌ನ ಮೇಲೆ ರಷ್ಯಾ ನಡೆಸುತ್ತಿರುವ ಬಾಂಬ್ ದಾಳಿಯನ್ನು ಪ್ರಪಂಚದ ಬಹುಪಾಲು ರಾಷ್ಟ್ರಗಳು ಖಂಡಿಸಿದ್ದವು ಜೊತೆಗೆ, ಪುಟಿನ್ ಹತ್ಯೆಯ ಪ್ರಯತ್ನದ ಕುರಿತ ಗುಪ್ತಚರ ಸಂಸ್ಥೆಗಳ ವರದಿಯನ್ನು ಫ್ರಾನ್ಸ್‌’ನ ಬಾಹ್ಯ ಭದ್ರತೆಯ ಜನರಲ್ ಡೈರೆಕ್ಟರೇಟ್‌ ದಿ ಡೈಲಿ ಬೀಸ್ಟ್‌ಗೆ ತಿಳಿಸಿತ್ತು.
ಪುಟಿನ್ ಅವರ ಹತ್ಯೆಗೆ ಕರೆ ನೀಡಿದ್ದ ವಿಚಾರದಲ್ಲಿ ದಕ್ಷಿಣ ಕೆರೊಲಿನಾ ಸೆನ್. ಲಿಂಡ್ಸೆ ಗ್ರಹಾಂ ಅವರು ತಮ್ಮ ಸಹ ರಿಪಬ್ಲಿಕನ್ ಶಾಸಕರಿಂದ ಟೀಕೆಗಳನ್ನು ಎದುರಿಸಿದ್ದರು.

Join Whatsapp