ಮಂಗಳೂರು: ಭಾರತ ಬಂದ್ ಗೆ ಬೆಂಬಲ ಸೂಚಿಸಿ ಎಸ್ ಡಿ ಪಿ ಐಯಿಂದ ಪ್ರತಿಭಟನೆ

Prasthutha|

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆ , ಭೂ ತಿದ್ದುಪಡಿ, ವಿಧ್ಯುತ್ ತಿದ್ದುಪಡಿ, ಕಾರ್ಮಿಕ ತಿದ್ದುಪಡಿ ಮಸೂದೆಗಳ ಜಾರಿ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ SDPI ಮಂಗಳೂರಿನಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ಕ್ಲಾಕ್ ಟವರ್ ಬಳಿಯಲ್ಲಿ ರಸ್ತೆ ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು.

- Advertisement -

ಪ್ರತಿಭಟನೆಯಲ್ಲಿ ಉದ್ಘಾಟನಾ ಭಾಷಣ ಮಾಡಿದಂತಹ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ, ಕೇಂದ್ರ ಸರಕಾರದ ಕರಾಳ , ಜನವಿರೋಧಿ ನಿಲುವುಗಳನ್ನು ಖಂಡಿಸಿದರು, ನಾಲ್ಕು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ರೈತರು ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆಲ್ಲವೂ ಕಾರಣ ಸರಕಾರದ ಅಪ್ರಭುದ್ದ ಜನವಿರೋಧಿ ನೀತಿಗಳಾಗಿದೆ, ದೇಶದ ಜೀವನಾಡಿಯಾದ ಅನ್ನದಾತನ ಶಾಪ ಸರಕಾರಕ್ಕೆ ತಟ್ಟಿ ಈ ಸರಕಾರದ ಅವನತಿಗೆ ಕಾರಣವಾಗಲಿದೆ ಎಂದರು

ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕೆ. ಸಿ. ರೋಡ್,  ಕಳೆದ ಹತ್ತು ತಿಂಗಳುಗಳಿಂದ ಬೀದಿಗೆ ಬಂದಿರುವ ರೈತರ ಬೇಡಿಕೆಗೆ ಸ್ಪಂದಿಸದಿರುವ ಮೂಲಕ ಸರಕಾರ ತನ್ನ ಫ್ಯಾಶಿಸ್ಟ್ ಧೋರಣೆಯ ಮನಸ್ಥಿತಿಯನ್ನು ತೋರಿಸಿದೆ ಎಂದರು.

- Advertisement -

ಜಿಲ್ಲಾ ಕಾರ್ಯದರ್ಶಿ ಗಳಾದ ಅಶ್ರಫ್ ಮಂಚಿ, ಅನ್ವರ್ ಸಾದತ್ ಬಜತ್ತೂರು , ಹಾಗೂ ಕಾರ್ಮಿಕ ಮುಖಂಡರಾದ ಖಾದರ್ ಫರಂಗಿಪೇಟೆ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಇದ್ದ  ಪ್ರತಿಭಟನಾಕಾರರು ಕ್ಲಾಕ್ ಟವರ್ ಸಮೀಪ ರಸ್ತೆತಡೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷರಾದ ಯಾಸೀನ್ ಅರ್ಕುಳ, ಉಪಾಧ್ಯಕ್ಷರಾದ ಲ್ಯಾನ್ಸೀ ತೋರಸ್, ಉಳ್ಳಾಲ ಕ್ಷೇತ್ರದ ಉಪಾಧ್ಯಕ್ಷರಾದ ಝಾಕಿರ್ ಉಳ್ಳಾಲ, ಇತರ ಮುಖಂಡರಾದ ಶರೀಫ್ ಪಾಂಡೇಶ್ವರ, ಕಾರ್ಪೊರೇಟರ್ ಮುನೀಬ್ ಬೆಂಗರೆ, ಸಿದ್ದೀಕ್ ಬೆಂಗರೆ , ಮುಝಮ್ಮಿಲ್ ನೂಯಿ ಇನ್ನಿತರು ಉಪಸ್ಥಿತರಿದ್ದರು  ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು


Join Whatsapp