ಮಂಗಳೂರು | ಹಿಂದೂ ರಾಷ್ಟ್ರ ಜಾಗೃತಿ ಸಭೆ ವಿರುದ್ಧ SDPI ಆಕ್ರೋಶ: ಮತಾಂಧರ ವಿರುದ್ಧ ಕ್ರಮಕ್ಕೆ ಠಾಣೆಗೆ ದೂರು

Prasthutha|

ಮಂಗಳೂರು: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಎನ್ನುವ ಸಂವಿಧಾನ ವಿರೋಧಿ, ರಾಷ್ಟ್ರ ವಿರೋಧಿ ಕಾರ್ಯಕ್ರಮದ ವಿರುದ್ಧ ಎಸ್’ಡಿಪಿಐ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದೆ.

- Advertisement -


ದೂರಿನಲ್ಲಿ 5 ರಂದು ಬೆಳ್ತಂಗಡಿ ತಾಲೂಕಿನ ಮುರ ಶ್ರೀರಾಮ ಭಜನಾ ಮಂದಿರದಲ್ಲಿ ಸನಾತನ ಸಂಸ್ಥೆಯ ಮುಖ್ಯಸ್ಥರಾದ ಆನಂದ ಗೌಡ ಮತ್ತು ವಿಜಯ ಕುಮಾರ್ ರವರ ನೇತೃತ್ವದಲ್ಲಿ ‘ಹಿಂದೂ ರಾಷ್ಟ್ರಜಾಗೃತಿ ಸಭೆ’ ಎಂಬ ಸಂವಿಧಾನ ಮತ್ತು ರಾಷ್ಟ್ರ ವಿರೋಧಿ ಅಜೆಂಡಾವನ್ನು ಹೊಂದಿರುವ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾರ್ಪಡಿಸಲು, ಹಿಂದುತ್ವ ಮನಸ್ಥಿತಿಯನ್ನು ಜನರ ಮಧ್ಯೆ ಹರಡಿಸಿ ಸಮಾಜದಲ್ಲಿ ಕೋಮು ಗಲಭೆ, ಗುಂಪು ಹತ್ಯೆ ಮತ್ತು ದೇಶ ವಿರೋಧಿ ಚಟುವಟಿಕೆ ನಡೆಸಲು ಯುವಕರಿಗೆ ಕರೆ ನೀಡಿ ಹಿಂದೂ – ಮುಸ್ಲಿಂ, ಕ್ರೈಸ್ತ ಹಾಗೂ ಇನ್ನಿತರ ಜನಾಂಗದೊಳಗೆ ಪರಸ್ಪರ ಅಪನಂಬಿಕೆ ಮೂಡಿಸಿ ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲ ಈ ಮತಾಂಧರು ಪ್ರಯತ್ನಿಸಿರುತ್ತಾರೆ.

ಈ ರಾಷ್ಟ್ರ ವಿರೋಧಿ ಕಾರ್ಯಕ್ರಮಗಳ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುತ್ತಾರೆ. ಆದ್ದರಿಂದ ಹಿಂದೂ ರಾಷ್ಟ್ರದ ಪರಿಕಲ್ಪನೆ ಹೊಂದಿ, ದೇಶ ವಿರೋಧಿ, ಸಂವಿಧಾನ ವಿರೋಧಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದ ಆನಂದ ಗೌಡ ಮತ್ತು ವಿಜಯ ಕುಮಾರ್ ಹಾಗೂ ಭಯೋತ್ಪಾದಕ ಸನಾತನ ಸಂಸ್ಥೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್’ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ದೂರಿನಲ್ಲಿ ಒತ್ತಾಯಿಸಿದ್ದಾರೆ

- Advertisement -

Join Whatsapp