ಕೋವಿಡ್ ಪ್ರಕರಣ ಪತ್ತೆ : ಮಂಗಳೂರಿನಲ್ಲಿ ಹಲವು ಶಾಲೆಗಳು ಬಂದ್ !

Prasthutha|

►ಯಾವೆಲ್ಲಾ ಶಾಲೆಗಳು ಬಂದ್, ಇಲ್ಲಿದೆ ಮಾಹಿತಿ

- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿರುವುದರಿಂದ ಒಂದು ವಾರದ ಮಟ್ಟಿಗೆ ಆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಐದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಶಾಲೆಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಒಂದು ವಾರದ ಕಾಲ ಬಂದ್ ಮಾಡಬೇಕೆಂದು ಆದೇಶಿಸಿದ್ದರು. ಇದೀಗ ನಗರದ ಕೆಲವೊಂದು ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅಂತಹಾ ಶಾಲೆಗಳನ್ನು ಒಂದು ವಾರದ ಕಾಲಾವಧಿಗೆ ಸ್ಥಗಿತಗೊಳಿಸಲಾಗಿದೆ.

ಮಂಗಳೂರಿನ ಬೆಂಗ್ರೆ ಕಸಬಾದ ಸರಕಾರಿ ಪ್ರೌಢ ಶಾಲೆ, ಡೊಂಗರಕೇರಿಯ ಕೆನರಾ ಸಿಬಿಎಸ್ಇ ಶಾಲೆ, ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮುಲ್ಕಿಯ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮ ಪ್ರೌಢ  ಶಾಲೆ, ಎಡಪದವಿನ ವಿವೇಕಾನಂದ ಪಿಯು ಕಾಲೇಜು ಮತ್ತು ಮುಚ್ಚೂರಿನ ಸರಕಾರಿ ಪ್ರೌಢ ಶಾಲೆಯನ್ನು ಕೋವಿಡ್ ಪತ್ತೆಯಾದ ಕಾರಣಕ್ಕಾಗಿ ಬಂದ್ ಮಾಡಲು ಆದೇಶಿಸಲಾಗಿದೆ.

Join Whatsapp