ಲಂಡನ್ ನ ಐಶಾರಾಮಿ ಮನೆ ಖಾಲಿ ಮಾಡಲು ವಿಜಯ ಮಲ್ಯಗೆ ಕೋರ್ಟ್ ಸೂಚನೆ

Prasthutha|

ಲಂಡನ್: ಮಧ್ಯ ಲಂಡನ್ನಿನಲ್ಲಿರುವ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ವಾಸಿಸುತ್ತಿರುವ ಐಶಾರಾಮಿ ಬಂಗಲೆಯನ್ನು ಸ್ವಿಸ್ ಬ್ಯಾಂಕಾದ ಯುಬಿಎಸ್ ಸಂಬಂಧದ ಮೊಕದ್ದಮೆಯಲ್ಲಿ ಖಾಲಿ ಮಾಡುವಂತೆ ಲಂಡನ್ ಹೈ ಕೋರ್ಟ್ ಆದೇಶ ನೀಡಿದೆ.

- Advertisement -

ರೀಜೆಂಟ್ ಪಾರ್ಕ್, ಟುಸ್ಸಾಡ್ಸ್ ಮೇಣದ ಮೂರ್ತಿಗಳ ಪ್ರದರ್ಶನಾಲಯ ಇತ್ಯಾದಿ ಗಣ್ಯ ನೆಲೆಗಳಿಗೆ ಹತ್ತಿರದಲ್ಲಿರುವ ಮಧ್ಯ ಲಂಡನ್ನಿನ ಕಾರ್ನ್ ವೆಲ್ ಟೆರೇಸ್ ನಲ್ಲಿರುವ ಈ ಮಿಲಿಯ ಪೌಂಡ್ ಮೌಲ್ಯದ ಬಂಗಲೆಯನ್ನು ಮಲ್ಯ ಯುಬಿಎಸ್ ಬ್ಯಾಂಕಿಗೆ ಅಡಮಾನ ಇಟ್ಟಿದ್ದರು.

ಈ ಮನೆಯಲ್ಲಿ ವಿಜಯ ಮಲ್ಯ ತನ್ನ ಮಗ ಸಿದ್ಧಾರ್ಥ್ ಮತ್ತು 95 ವರುಷದ ತಾಯಿ ಲಲಿತಾ ಅವರ ಜೊತೆಗೆ ವಾಸಿಸುತ್ತಿದ್ದಾರೆ. ಲಂಡನ್ ಹೈ ಕೋರ್ಟಿನ ಚಾನ್ಸೆರಿ ವಿಭಾಗದ ನ್ಯಾಯಾಧೀಶರು ಮಲ್ಯರ ವಕೀಲರ ಮನವಿ ಬದಿಗಿರಿಸಿ ಮನೆ ಬಿಡಲು ಸೂಚಿಸಿದರು. ಕಳೆದ ಬಾರಿಯ ವಿಚಾರಣೆಯಲ್ಲಿ 2020ರ ಏಪ್ರಿಲ್ ನೊಳಗೆ ಸಾಲ ತೀರಿಸುವುದಾಗಿ ಮಲ್ಯರ ವಕೀಲರು ಹೇಳಿದ್ದರು. ಕೊರೋನಾ ಎಂದು ಮುಂದೂಡಿದರೂ ಅವರಿನ್ನೂ ಸಾಲ ಕಟ್ಟಿಲ್ಲ.

- Advertisement -

2020ರಲ್ಲೇ ಮನೆ ಬಿಡಿಸಲು ಕೋವಿಡ್ ಕಾರಣದಿಂದ ಯುಬಿಎಸ್ ನವರಿಗೆ ಸಾಧ್ಯವಾಗಿರಲಿಲ್ಲ. ಮಂಗಳವಾರದ ಕೋರ್ಟು ಆದೇಶದಂತೆ ಯುಬಿಎಸ್ ಮನೆಯನ್ನು ವಶಕ್ಕೆ ತೆಗೆದುಕೊಳ್ಳಬಹುದು.

ಉತ್ತರ ಬ್ರಿಟನ್ನಿನ ಹೆರ್ಟ್ ಫೋರ್ಡ್ ಶೈರ್ ತೋಟದ ಮನೆ ಸಹಿತ ಇಂಗ್ಲೆಂಡಿನಲ್ಲಿ ಮಲ್ಯರ ಕುಟುಂಬವು ಇನ್ನೂ ಹತ್ತಾರು ಆಸ್ತಿಗಳನ್ನು ಬಂಗಲೆಗಳನ್ನು ಹೊಂದಿದೆ.

ಕಿಂಗ್ ಫಿಶರ್ ವಿಮಾನ ಸಂಸ್ಥೆ ಮುಳುಗಡೆ ಆದ ಮೇಲೆ ಭಾರತದಲ್ಲಿ ಬ್ಯಾಂಕುಗಳಿಗೆ ರೂ. 9,000 ಕೋಟಿ ಸಾಲ ತುಂಬಬೇಕಾಗಿದೆ ಎಂದು ತಿಳಿಯುತ್ತಲೇ ವಿಜಯ ಮಲ್ಯ ಲಂಡನ್ ಗೆ ಪರಾರಿಯಾಗಿ ಅಲ್ಲಿ ವಾಸಿಸುತ್ತಿದ್ದಾರೆ.

ಮಲ್ಯ ಮಾತ್ರ ಇದನ್ನು ನಿರಾಕರಿಸುತ್ತಲೇ ಇದ್ದಾರೆ. ಲಂಡನ್ ಹೈ ಕೋರ್ಟು ಹಿಂದಿನ ವಿಚಾರಣೆಯಲ್ಲಿ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವ ತೀರ್ಪು ನೀಡಿತ್ತು. ಅದಕ್ಕೂ ಮಲ್ಯ ಜಾಮೀನು ಪಡೆದು ಲಂಡನ್ ನಲ್ಲೇ ಇದ್ದಾರೆ.

Join Whatsapp