ಮಂಗಳೂರು: ಕೇರಳದಲ್ಲಿ ಸಂಘಪರಿವಾರ ತಲೆ ಎತ್ತಲು ಬಿಡಲಾರೆವು: ಶೈಲಜಾ ಟೀಚರ್

Prasthutha|

ಮಂಗಳೂರು: ಕೇರಳದಲ್ಲಿ ಸಂಘಪರಿವಾರವನ್ನು ತಲೆ ಎತ್ತಲು ಬಿಡುವುದಿಲ್ಲ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್‌ ಸಂಘಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.

- Advertisement -

ನಗರದ ಹೊರವಲಯದ ಗುರುಪುರದಲ್ಲಿ ನಡೆದ ಸಿಪಿಐಎಂ ದ.ಕ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಸರಕಾರ ಕಾರ್ಪೋರೇಟ್‌ ಸೇವೆ ಮಾಡುತ್ತಿದೆ. ಅದನ್ನು ಪ್ರತಿಭಟಿಸುವವರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಿದೆ. ಧರ್ಮದ ಹೆಸರಿನಲ್ಲಿ ಬಡತನ, ನಿರುದ್ಯೋಗ ನಿವಾರಿಸಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ಆತ್ಮ, ಅದನ್ನು ರಕ್ಷಿಸಲು ಎಡಪಕ್ಷದಿಂದ ಮಾತ್ರ ಸಾಧ್ಯ ಎಂದರು.


ಎಲ್ಲಾ ಧರ್ಮವೂ ಅಹಿಂಸೆ, ಸಮಾನತೆ, ಮಾನವತೆಯನ್ನೇ ಪ್ರತಿಪಾದಿಸುತ್ತದೆ. ನಾರಾಯಣ ಗುರುಗಳೂ ಸಹ ಅದನ್ನೇ ಬೋಧಿಸಿದ್ದರು. ಆದರೆ ಸಂಘಪರಿವಾರ ಮಾತ್ರ ಧರ್ಮ, ಜಾತಿ ಹೆಸರಿನಲ್ಲಿ ವಿಭಜಿಸುತ್ತಿದೆ. ದೇಶಾದ್ಯಂತ ಸಂಘಪರಿವಾರ ಅದೆಷ್ಟು ಕೋಮು, ಮತಾಂಧತೆಯಿಂದ ಹಲವರ ಜೀವ ಬಲಿ ಪಡೆದಿದೆ. ಗುಜರಾತ್‌ನಲ್ಲಿ ಕರಸೇವೆ ಹೆಸರಿನಲ್ಲಿ ನಡೆದ ಜನಾಂಗೀಯ ಹತ್ಯಾಕಾಂಡ ಮರೆಯಲು ಸಾಧ್ಯವಿಲ್ಲ. ಅಲ್ಲಿನ ಮುಸ್ಲಿಮರನ್ನು ಪೆಟ್ರೋಲ್‌ ಸುರಿದು ಜೀವಂತವಾಗಿ ಸುಟ್ಟಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ವಹಿಸಿದ್ದರು. ಕೆಆರ್ ಶ್ರೀಯಾನ್, ಕೆ. ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಯುಬಿ ಲೋಕಯ್ಯ, ಮುನೀರ್‌ಕಾಟಿಪಳ್ಳ, ಸುನೀಲ್‌ ಕುಮಾರ್‌ ಬಜಾಲ್‌, ಸದಾಶಿವ ದಾಸ್, ಮನೋಜ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.

Join Whatsapp