ಮಂಗಳೂರು; ರಾಘವೇಂದ್ರ ಆಚಾರ್ ಕೊಲೆ ಪ್ರಕರಣ, ಆರೋಪಿಯ ಭಾವಚಿತ್ರ ಬಿಡುಗಡೆ ಮಾಡಿ ಸಾರ್ವಜನಿಕರ ನೆರವು ಕೋರಿದ ಪೊಲೀಸರು

Prasthutha|

ಮಂಗಳೂರು: ಕಳೆದ ಶುಕ್ರವಾರ ಬಲ್ಮಠ ರಸ್ತೆಯ ಮಂಗಳೂರು ಜ್ಯುವೆಲ್ಲರ್ಸ್ ನೌಕರ ರಾಘವೇಂದ್ರ ಆಚಾರ್ ಅವರನ್ನು ಚಾಕುವಿನಿಂದ ಇರಿದು ಕೊಲೆಗೈದ ಆರೋಪಿಯ ಭಾವಚಿತ್ರ ಸಿಸಿಟಿವಿಗಳಲ್ಲಿ ದಾಖಲಾಗಿದ್ದು, ಈ ಭಾವಚಿತ್ರವನ್ನು ಬಿಡುಗಡೆ ಮಾಡಿರುವವು ಪೊಲೀಸರು, ಆರೋಪಿಯ ಪತ್ತೆಗೆ ಸಾರ್ವಜನಿಕರ ನೆರವು ಕೋರಿದ್ದಾರೆ.

- Advertisement -

ಫೆಬ್ರವರಿ 3 ರಂದು ಮಧ್ಯಾಹ್ನ ಸುಮಾರು 3-30 ಗಂಟೆಯಿಂದ 3-45 ಗಂಟೆ ಮಧ್ಯೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿನ ಮಂಗಳೂರು ಜ್ಯುವೆಲ್ಲರ್ಸ್ ಗೆ ಈ ಕೆಳಕಂಡ ವ್ಯಕ್ತಿಯು ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯೊಳಗೆ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ್ದಾನೆ.

ಸ್ಥಳೀಯ ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಣಗಳಲ್ಲಿ ಈ ವ್ಯಕ್ತಿಯ ಭಾವಚಿತ್ರವು ಪತ್ತೆಯಾಗಿದ್ದು, ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ಅಧಿಕಾರಿಯವರ ಮೊಬೈಲ್ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿದಾರರ ವಿವರವನ್ನು ಗೌಫ್ಯವಾಗಿಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

- Advertisement -

 [ 1) ಎಸಿಪಿ ಸಿಸಿಬಿ, ಮಂಗಳೂರು ನಗರ  – ಪಿ ಎ ಹೆಗಡೆ 9945054333, 

2) ಎಸಿಪಿ ಕೆಂದ್ರ ಉಪವಿಭಾಗ, ಮಂಗಳೂರು ನಗರ – ಮಹೇಶ್ ಕುಮಾರ್ -9480805320

Join Whatsapp