ಮಂಗಳೂರು: ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ| 167 ಪ್ರಕರಣ ದಾಖಲು

Prasthutha|

ಮಂಗಳೂರು: ನಗರದ ವಿವಿಧ ಬಸ್ ಗಳಿಂದ ಕರ್ಕಶ ಹಾರ್ನ್ ಗೆ ಸಂಬಂಧಿಸಿದ ಉಪಕರಣಗಳನ್ನು ಟ್ರಾಫಿಕ್ ಪೊಲೀಸರು ತೆರವುಗೊಳಿಸಿದ್ದಾರೆ.

- Advertisement -

ತಪಾಸಣೆ ವೇಳೆ ಕರ್ಕಶ ಹಾರ್ನ್ ಬಳಕೆ ಮಾಡುತ್ತಿದ್ದ ವಾಹನಗಳ ಮೇಲೆ ಕೇಸು ದಾಖಲಿಸಲಾಗಿದ್ದು, ಒಂದೇ ದಿನದಲ್ಲಿ 167 ಪ್ರಕರಣ ದಾಖಲಾಗಿದೆ. 83500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನಗರದ ಖಾಸಗಿ ಬಸ್ಸುಗಳಲ್ಲಿ ಕರ್ಕಶ ಹಾರ್ನ್ ‌ಹೆಚ್ಚಾಗಿ ಬಳಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಎಸಿಪಿ ನಟರಾಜ್ ಮತ್ತು ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.



Join Whatsapp