ಮಂಗಳೂರು: ವಿದ್ಯಾರ್ಥಿನಿ ನಾಪತ್ತೆ

Prasthutha|

- Advertisement -

ಮಂಗಳೂರು: ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದ ಆಸ್ಮಾ ಬಾನೊ ಮೇ 15ರಂದು ಕಾಣೆಯಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್‌ ಠಾಣೆಗೆ ದೂರು ದಾಖಲಾಗಿದೆ.

ಆಸ್ಮಾ ಬಾನೊ ಮೇ 15ರಂದು ಬೆಳಗ್ಗೆ 9.15ಕ್ಕೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ತೆರಳಿದ್ದರು. ಅನಂತರ ಮನೆಗೆ ಬರಲಿಲ್ಲ.

- Advertisement -

18 ವರ್ಷದ ಆಸ್ಮಾ ಬಾನೊ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ ಬಲ್ಲರು. ಈ ಬಗ್ಗೆ ಕಾಣೆಯಾದವರ ತಂದೆ ಮಹಮ್ಮದ್‌ ಖಾಲಿಕ್‌ ಅವರು ಮಂಗಳೂರು ಪೂರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆ ದೂರವಾಣಿ ಸಂಖ್ಯೆ 0824-2220520 ಅಥವಾ ಜಿಲ್ಲಾ ಕಂಟ್ರೋಲ್‌ ರೂಂ 2220800, 2220801 ಅನ್ನು ಸಂಪರ್ಕಿಸುವಂತೆ ಪೊಲೀಸ್‌ ಪ್ರಕಟನೆ ತಿಳಿಸಿದೆ.

Join Whatsapp