6 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಮೆಟಾ ನಿರ್ಧಾರ

Prasthutha|

ವಾಷಿಂಗ್ಟನ್‌: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌ನ ಮಾತೃಸಂಸ್ಥೆ ಮೆಟಾ ತನ್ನ ಉದ್ಯೋಗ ಕಡಿತ ಮುಂದುವರಿಸಿದ್ದು, ಮಾಸಾಂತ್ಯಕ್ಕೆ ಜಾಗತಿಕ ಉದ್ಯೋಗಿಗಳ ಪೈಕಿ 6 ಸಾವಿರ ಮಂದಿಯನ್ನು ವಜಾಗೊಳಿಸಲು ನಿರ್ಧರಿಸಿದೆ.

ಸಂಸ್ಥೆಯ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್‌ಕ್ಲೆಗ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ಮಾಸಾಂತ್ಯದ ಒಳಗಾಗಿ ಅದು ಜಾರಿಯಾಗುವ ಸಾಧ್ಯತೆ ಇದೆ. 2022ರ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗವನ್ನು ಮೆಟಾ ಕಡಿತಗೊಳಿಸಿತ್ತು. ಪ್ರಸಕ್ತ ವರ್ಷ 10 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಇತ್ತೀಚೆಗೆ ಘೋಷಿಸಿದ್ದರು. ಅದರ ಫ‌ಲವಾಗಿ ಮಾರ್ಚ್‌ನಲ್ಲಿ ನಾಲ್ಕು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

- Advertisement -