ಮಂಗಳೂರು | ಮಹೇಶ್ ಬಸ್ ಮಾಲಕ ಆತ್ಮಹತ್ಯೆ: ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಬಸ್’ಗಳು ಭಾಗಿ

Prasthutha|

- Advertisement -

ಮಂಗಳೂರು: ಮಹೇಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ (43) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರಿನ ಕದ್ರಿಯ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕಾಶ್ ಖಾಸಗಿ ಬಸ್, ಟೂರಿಸ್ಟ್, ಲಾರಿ ಉದ್ಯಮದಲ್ಲಿ ಹೆಸರು ಮಾಡಿದ್ದರು. ಟ್ರಾವೆಲ್ಸ್ ಉದ್ಯಮದಲ್ಲಿ ಪ್ರಕಾಶ್ ಗುರುತಿಸಿಕೊಂಡಿದ್ದರು. ಮಾತ್ರವಲ್ಲದೆ, ಮಹೇಶ್ ಟ್ರಾವೆಲ್ಸ್ ಮಂಗಳೂರು, ಉಡುಪಿ ಭಾಗದಲ್ಲಿ ಭಾರೀ ಪ್ರಸಿದ್ದಿ ಪಡೆದಿತ್ತು. ಆದರೆ ಇದ್ದಕ್ಕಿದ್ದಂತೆಯೇ ಅದರ ಮಾಲೀಕ ಪ್ರಕಾಶ್ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಕಾರಣ ತಿಳಿದುಬರಬೇಕಿದೆ.

- Advertisement -

ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಬಸ್’ಗಳು ಭಾಗಿ

ಮರಣೋತ್ತರ ಪರೀಕ್ಷೆ ನಡೆದು ಸೋಮವಾರ ಮೃತದೇಹವನ್ನು ಅವರ ಕದ್ರಿ ಕಂಬಳದ ಮನೆಗೆ ರವಾನಿಸಲಾಯಿತು. ಈ ವೇಳೆ ಅವರ ಬಸ್ ಗಳನ್ನು ಎಜೆ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಬಸ್ ಗಳು ಅವರ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ತೆರಳಿದವು.

Join Whatsapp