ಮದ್ಯ ನಿರ್ಮೂಲನೆ ಮಾಡಬೇಕಾದ ಸರಕಾರ ಮದ್ಯವನ್ನು ಪ್ರೋತ್ಸಾಹಿಸುತ್ತದೆಯೇ?: ಸಿ.ಹೆಚ್. ಸಲಾಮ್

Prasthutha|


ಬೀದರ್: ಆರೋಗ್ಯ,ಕುಟುಂಬ ಮತ್ತು ಸಮಾಜಕ್ಕೆ ಹಾನಿಕಾರಕವಾಗಿರುವ ಮದ್ಯವನ್ನು ನಿರ್ಮೂಲನೆ ಮಾಡುವ ಬದಲು ಮದ್ಯದಂಗಡಿ ತೆರೆದು ಪ್ರೋತ್ಸಾಹಿಸುವ ಸರ್ಕಾರದ ಕ್ರಮ ಖಂಡನೀಯ. ಮದ್ಯ ನಿರ್ಮೂಲನೆ ಗೆ ಹೋರಾಡಿದ ಮಹಾತ್ಮಾ ಗಾಂಧಿಯವರ ಜಯಂತಿ ಆಚರಿಸುತ್ತಿರುವಾ ಇಂತಹ ಗಾಂಧಿ ವಿರೋಧಿ ನಡೆಯ ಬಗ್ಗೆ ಸರಕಾರವನ್ನು ಎಚ್ಚರಿಸಬೇಕಾಗಿದೆ. ಮದ್ಯಪಾನ ಪ್ರೋತ್ಸಾಹಿಸುವ ಸರಕಾರದ ಈ ಕ್ರಮವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ರಾಜ್ಯ ಮುಖಂಡರಾದ ಸಿ.ಹೆಚ್ ಅಬ್ದುಸ್ಸಲಾಮ್ ಹೇಳಿದರು. ಅವರು ಬೀದರ್ ನ ಅಂಬೇಡ್ಕರ್ ಸರ್ಕಲ್‌ ನಲ್ಲಿ ಗ್ರಾಮೀಣ ಮಹಿಳಾ ಕೂಲಿ ಕಾರ್ಮಿಕರ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪ್ರತಿಭಟನೆಯಲ್ಲಿ ವೆಲ್ಫೇರ್ ಪಾರ್ಟಿಯ ಇನ್ನೋರ್ವ ರಾಜ್ಯಮುಖಂಡರಾದ ಆಸಿಫ್ ಬಿಳಿಕುದುರಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಮಹಿಳಾ ಕೂಲಿ ಕಾರ್ಮಿಕರ ಸಂಘಟನೆ ಬೀದರ್ ನ ಅಂಬೇಡ್ಕರ್ ಸರ್ಕಲ್ ನಲ್ಲಿ ಮದ್ಯ ಮುಕ್ತ ಕರ್ನಾಟಕ ಕ್ಕೆ ಆಗ್ರಹಿಸಿ ಹಮ್ಮಿಕೊಂಡಿರುವ ಈ ಪ್ರತಿಭಟನೆಗೆ ವೆಲ್ಫೇರ್ ಪಾರ್ಟಿ ಕರ್ನಾಟಕ ಬೆಂಬಲ ಸೂಚಿಸಿದೆ.

Join Whatsapp