ಮಂಗಳೂರು| ಕಾರು ಡಿಕ್ಕಿ ಹೊಡೆದು ಇಬ್ಬರು ಮೃತ್ಯು: Mad In Kudla ಖ್ಯಾತಿಯ ಯೂಟ್ಯೂಬರ್ ಅರ್ಪಿತ್ ಬಂಧನ

Prasthutha|

ಮುಲ್ಕಿ : ಪಡುಪಣಂಬೂರು ಪೆಟ್ರೋಲ್ ಬಂಕ್‌ ಬಳಿ ನಡೆದ ಹಿಟ್ ಅಂಡ್‌ ರನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಯೂಟ್ಯೂಬರ್, ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ಪ್ರಕರಣದಆರೋಪಿ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದ ಇಂಧೋರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿತ್ತು. ಲಾರಿಯಲ್ಲಿದ್ದ ಮಧ್ಯಪ್ರದೇಶ ನಿವಾಸಿಗಳಾದ ಬಬುಲು(23), ಅಚಲ್ ಸಿಂಗ್ (30) ಹಾಗೂ ಕೇರಳ ನಿವಾಸಿ ಅನೀಶ್(42) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯ‌ರ್ ತೆಗೆದು ದುರಸ್ತಿ ಮಾಡುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಚಲಿಸಿದ ಕಾರು ಲಾರಿಯ ಟಯಲ್ ದುರಸ್ತಿ ಮಾಡುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

Join Whatsapp