ಮಂಗಳೂರು। ಸೈಕಲ್ ಮೇಲೆ ಹರಿದ ಜೆಸಿಬಿ: ಬಾಲಕ ಸ್ಥಳದಲ್ಲೇ ಮೃತ್ಯು

Prasthutha|

ಮಂಗಳೂರು: ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿಯೊಂದು ಪಕ್ಕದಲ್ಲೇ ಸೈಕಲ್’ನಲ್ಲಿ ಚಲಿಸುತ್ತಿದ್ದ ಬಾಲಕನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿರುವ ಘಟನೆ ವಿಟ್ಲ ಕನ್ಯಾನದ ಕಣಿಯೂರು ಎಂಬಲ್ಲಿ ಇಂದು ನಡೆದಿದೆ. ಮೃತ ಬಾಲಕನನ್ನು ಕಣಿಯೂರು ನಿವಾಸಿ ಹಸೈನಾರ್ ಅವರ ಪುತ್ರ ಏಳು ವರ್ಷದ ಮಹಮ್ಮದ್ ಅಖಿಲ್ ಎಂದು ಗುರುತಿಸಲಾಗಿದೆ.

- Advertisement -

ಗದಗ ಮೂಲಕ ಜೆಸಿಬಿ ಚಾಲಕ ನಶೆಯಲ್ಲಿದ್ದು, ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆಯ ಬಳಿಕವೂ ಚಾಲಕ ಮೃತ ಬಾಲಕನನ್ನು ಜೆಸಿಬಿಯ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆಂದು ಆರೋಪಿಸಲಾಗಿದ್ದು, ಕೂಡಲೇ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

Join Whatsapp